ಸಂಸತ್ತು ಪಿಒಕೆ ವಾಪಸ್ ಬಯಸಿದರೆ ಸೇನೆಯಿಂದ ತಕ್ಕ ಕ್ರಮ: ನಾರವಾಣೆ

ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಸಂಸತ್ ತೀರ್ಮಾನ ತೆಗೆದುಕೊಂಡರೆ ಅದರ ಜಾರಿಗೆ ಸೇನೆ ಬದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಶನಿವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಸಂಸತ್ ತೀರ್ಮಾನ ತೆಗೆದುಕೊಂಡರೆ ಅದರ ಜಾರಿಗೆ ಸೇನೆ ಬದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಶನಿವಾರ ಹೇಳಿದ್ದಾರೆ.

ಈ ವಿಚಾರದಲ್ಲಿ ಸಂಸತ್ ನಮಗೆ ನಿರ್ದೇಶನ ನೀಡಿದರೆ ಸೇನೆಯು ತಕ್ಕ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ್ಯವು ನಮ್ಮದು ಎಂಬ ಸಂಸತ್ತಿನ ನಿರ್ಣಯ ಬಹಳ ಹಿಂದೆಯೇ ಇತ್ತು. ಸಂಸತ್ತು ಅದು ನಮ್ಮದು ಎಂದು ನಮಗೆ ನಿರ್ದೇಶನ ಕೊಟ್ಟರೆ , ನಾವು ಅದರ ಮೇಲೆ ಕಾರ್ಯನಿರ್ವಹಿಸುತ್ತೇವೆ ನಾರವಾಣೆ ಇಲ್ಲಿನ ಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಭಾರತೀಯ ಸೇನೆಯು ವೃತ್ತಿಪರ ಸೇನೆಯಾಗಿದೆ ನಾವು ಜನರಿಗೆ ಮತ್ತು ಭಾರತದ ಜನರಿಗಾಗಿ, ನಮ್ಮ ದೇಶವಾಸಿಗಳಿಗೆ. ನಾವು ಭಾರತೀಯ ಸಂವಿಧಾನ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ' ಎಂದು ಅವರು ಹೇಳಿದರು. ಸಿಯಾಚಿನ್ ಬಗ್ಗೆ ಮಾತನಾಡಿದ ಅವರು, ಸಿಯಾಚಿನ್ ನಮಗೆ ಬಹಳ ಮುಖ್ಯವಾಗಿದೆ, ಆಯಕಟ್ಟಿನ ಮಹತ್ವದ್ದಾಗಿದೆ ಎಂದೂ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com