ಶಂಕಿತ ಉಗ್ರರಿಂದ ಹತ್ಯೆಯಾದ ಸಬ್ ಇನ್ಸ್‍ಪೆಕ್ಟರ್ ಕುಟುಂಬಕ್ಕೆ ಸಿಎಂ ಪಳನಿಸ್ವಾಮಿ 1 ಕೋಟಿ ರೂ. ಹಸ್ತಾಂತರ!

ಕನ್ಯಾಕುಮಾರಿ ಜಿಲ್ಲೆಯಲ್ಲಿ ಕಳೆದ ವಾರ ಶಂಕಿತ ಇಬ್ಬರು ಉಗ್ರರ ಗುಂಡೇಟಿಗೆ ಬಲಿಯಾದ ವಿಶೇಷ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸೋಮವಾರ ಒಂದು ಕೋಟಿ ರೂ. ಹಣಕಾಸು ನೆರವನ್ನು ಹಸ್ತಾಂತರಿಸಿದ್ದಾರೆ. 
ಚೆಕ್ ಹಸ್ತಾಂತರಿಸಿದ ಸಿಎಂ
ಚೆಕ್ ಹಸ್ತಾಂತರಿಸಿದ ಸಿಎಂ

ಚೆನ್ನೈ: ಕನ್ಯಾಕುಮಾರಿ ಜಿಲ್ಲೆಯಲ್ಲಿ ಕಳೆದ ವಾರ ಶಂಕಿತ ಇಬ್ಬರು ಉಗ್ರರ ಗುಂಡೇಟಿಗೆ ಬಲಿಯಾದ ವಿಶೇಷ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸೋಮವಾರ ಒಂದು ಕೋಟಿ ರೂ. ಹಣಕಾಸು ನೆರವನ್ನು ಹಸ್ತಾಂತರಿಸಿದ್ದಾರೆ. 

ಕಳೆದ ಶುಕ್ರವಾರ ಪ್ರಕಟಿಸಿದಂತೆ ಮುಖ್ಯಮಂತ್ರಿಯವರು ಸಚಿವಾಲಯದ ಕಟ್ಟಡದಲ್ಲಿ ಸಬ್ ಇನ್ಸ್ ಪೆಕ್ಟರ್ ಕುಟುಂಬಕ್ಕೆ ಒಂದು ಕೋಟಿ ರೂ. ಮೊತ್ತದ ಪರಿಹಾರ ಚೆಕ್ ಅನ್ನು ಹಸ್ತಾಂತರಿಸಿ, ಕುಟುಂಬದವರನ್ನು ಸಂತೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಳನಿಸ್ವಾಮಿ ಅವರು, ವಿಶೇಷ ಸಬ್ ಇನ್ಸ್ ಪೆಕ್ಟರ್ ಅವರ ಮಹಾತ್ಯಾಗವನ್ನು ಪರಿಗಣಿಸಿ ಒಂದು ಕೋಟಿ ರೂ. ಪರಿಹಾರ ಪ್ರಕಟಿಸಲಾಗಿತ್ತು. ಅದರಂತೆ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಲಾಗಿದೆ. ಅನುಕಂಪದ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಪರಿಗಣಿಸಿ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 

ಹುತಾತ್ಮರಾದ ಸಬ್ ಇನ್ಸ್ ಪೆಕ್ಟರ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com