ದೆಹಲಿ:ಎಲೆಕ್ಷನ್ ಪ್ರಚಾರದ ಗೀತೆಗೆ ಭರ್ಜರಿ ಸ್ಟೆಪ್: ಆಪ್ ಗೆ ಮಾನನಷ್ಟ ನೋಟಿಸ್ ಕಳುಹಿಸಿದ ತಿವಾರಿ

ಮುಂಬರುವ ಆಸೆಂಬ್ಲಿ ಚುನಾವಣೆಗಾಗಿ ಆಪ್ ಪ್ರಚಾರದ ಹಾಡಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಎಎಪಿ ಟ್ವೀಟ್ ಮಾಡಿದ ನಂತರ  ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿರುವ ಬಿಜೆಪಿ, ಆಗಿರುವ ಹಾನಿಗಾಗಿ 500 ಕೋಟಿ ರೂ. ಮಾನನಷ್ಟ ನೋಟಿಸ್ ನ್ನು ಎಎಪಿಗೆ ಕಳುಹಿಸಿದೆ.
ಮನೋಜ್ ತಿವಾರಿ ಡ್ಯಾನ್ಸ್
ಮನೋಜ್ ತಿವಾರಿ ಡ್ಯಾನ್ಸ್

ನವದೆಹಲಿ: ಮುಂಬರುವ ಆಸೆಂಬ್ಲಿ ಚುನಾವಣೆಗಾಗಿ ಆಪ್ ಪ್ರಚಾರದ ಹಾಡಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಎಎಪಿ ಟ್ವೀಟ್ ಮಾಡಿದ ನಂತರ  ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿರುವ ಬಿಜೆಪಿ, ಆಗಿರುವ ಹಾನಿಗಾಗಿ 500 ಕೋಟಿ ರೂ. ಮಾನನಷ್ಟ ನೋಟಿಸ್ ನ್ನು ಎಎಪಿಗೆ ಕಳುಹಿಸಿದೆ.

ಲಾಗೆ ರಾಹೋ ಕೇಜ್ರಿವಾಲ್ ಹಾಡಿಗೆ ತಿವಾರಿ ಸ್ಟೇಪ್ ಹಾಕುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಚುನಾವಣಾ ಪ್ರಚಾರ ಗೀತೆಗಾಗಿ ನನ್ನ ವಿಡಿಯೋವನ್ನು ಬಳಸಲು ನಿಮಗೆ ಹಕ್ಕು ಕೊಟ್ಟವರು ಎಂದು ತಿವಾರಿ ಪ್ರಶ್ನಿಸಿದ್ದಾರೆ.

ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ನೆಲಕಚ್ಚಲಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷರೂ ಆಗಿರುವ ತಿವಾರಿ ಹೇಳಿದ್ದಾರೆ.ವಿಡಿಯೋ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಬೌದಿಕ ಆಸ್ತಿ ಹಕ್ಕು ಉಲ್ಲಂಘನೆ ಹಾಗೂ ಮಾನನಷ್ಟವಾಗಿ 500 ಕೋಟಿ ರೂ ನೀಡುವಂತೆ ಎಎಪಿಗೆ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಎಎಪಿ ತೋರಿಸಿರುವ ಚುನಾವಣಾ ಪ್ರಚಾರ ಗೀತೆಯಲ್ಲಿ ಕೇಜ್ರಿವಾಲ್ ಅವರಿಗಿಂತ ತಿವಾರಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ ಎಂದು ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖಂಡ ನೀಲ್ ಕಂಠ್ ಭಕ್ಷಿ ಹೇಳಿದ್ದಾರೆ. ಆದರೆ, ಆಮ್ ಆದ್ಮಿ ಪಕ್ಷದಿಂದ ಯಾವುದೇ ಪ್ರತ್ರಿಕ್ರಿಯೆ ಬಂದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com