ದೆಹಲಿ ಚುನಾವಣೆ: ಎಲ್ಲಾ 70 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಎಎಪಿ  46 ಹಾಲಿ ಶಾಸಕರಿಗೆ ಟಿಕೆಟ್

ದೆಹಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಫೆಬ್ರವರಿ 8ರಂದು ನಡೆಯುವ ವಿಧಾನಸಭೆ ಚುನಾವಣೆಗೆ  70 ಸದಸ್ಯರ ತನ್ನ ಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮತ್ತೊಮ್ಮೆ ಕಣಕ್ಕಿಳಿದು ದೆಹಲಿ ಗದ್ದುಗೆ ಏರಲು ಪಕ್ಷ ಸಿದ್ದತೆ ನಡೆಸಿದೆ.

Published: 14th January 2020 08:12 PM  |   Last Updated: 14th January 2020 08:12 PM   |  A+A-


ದೆಹಲಿ ಮುಖ್ಯಮಂತ್ರಿ ಅರವೈಂದ ಕೇಜ್ರಿವಾಲ್ ಹಾಗೂ ಡಿಸಿಎಂ ಸಿಸೋಡಿಯಾ

Posted By : Raghavendra Adiga
Source : IANS

ನವದೆಹಲಿ: ದೆಹಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಫೆಬ್ರವರಿ 8ರಂದು ನಡೆಯುವ ವಿಧಾನಸಭೆ ಚುನಾವಣೆಗೆ  70 ಸದಸ್ಯರ ತನ್ನ ಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮತ್ತೊಮ್ಮೆ ಕಣಕ್ಕಿಳಿದು ದೆಹಲಿ ಗದ್ದುಗೆ ಏರಲು ಪಕ್ಷ ಸಿದ್ದತೆ ನಡೆಸಿದೆ.

ಅರವಿಂದ ಕೇಜ್ರಿವಾಲ್ ನವದೆಹಲಿಯಿಂದ ಸ್ಪರ್ಧಿಸುತ್ತಿದ್ದರೆ ಡಿಸಿಎಂ ಮನೀಶ್ ಸಿಸೋಡಿಯಾ ಪತ್ಪರ್ಗಂಜ್ ನಿಂದ ಕಣಕ್ಕಿಳಿಯಲಿದ್ದಾರೆ. 

ಹಾಲಿ ಶಾಸಕರಲ್ಲಿ 46 ಮಂದಿಗೆ ಪಕ್ಷದ ಟಿಕೆಟ್ ದೊರಕಿದ್ದು 15 ಮಂದಿ ಶಾಸಕರನ್ನು ಬದಲಿಸಲಾಗಿದೆ,.ಒಂಬತ್ತು ಸ್ಥಾನಗಳು ಖಾಲಿ ಇದ್ದುದರಿಂದ, ಎಎಪಿ ಹೊಸ ಅಭ್ಯರ್ಥಿಗಳನ್ನೂ ಹೆಸರಿಸಿದೆ.

 

 

ಪಕ್ಷದ ಅಭ್ಯರ್ಥಿಗಳ ಪೈಕಿ ಎಂಟು ಜನ ಮಹಿಳೆಯರು ಸೇರಿದ್ದಾರೆ.ಹೊಸ ಮುಖಗಳಲ್ಲಿ ಮಾಜಿ ಕಾಂಗ್ರೆಸ್ಸಿಗರಾದ ಶೋಯೆಬ್ ಇಕ್ಬಾಲ್ (ಮಾಟಿಯಾ ಮಹಲ್), ಪ್ರಹ್ಲಾದ್ ಸಿಂಗ್ ಸಾಹ್ನಿ (ಚಾಂದನಿ ಚೌಕ್) ಮತ್ತು ಪಕ್ಷದ ಲೋಕಸಭಾ ಅಭ್ಯರ್ಥಿಗಳಾದ ದಿಲೀಪ್ ಪಾಂಡೆ (ತಿಮಾರ್‌ಪುರ), ಅತಿಶಿ (ಕಲ್ಕಾಜಿ) ಮತ್ತು ರಾಘವ್ ಚಾಧಾ (ರಾಜಿಂದರ್ ನಗರ) ಸೇರಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp