'ಆರ್‌ಎಸ್‌ಎಸ್, ಬಿಜೆಪಿ' ಬೆಂಬಲಿಗ, ಇಲ್ಲಿರ್ಬೇಡಿ ಹೊರ ಹೋಗಿ! ಸರ್ಕಾರಿ ವೈದ್ಯರ ಮೇಲೆ ಅಖಿಲೇಶ್ ಪ್ರತಾಪದ ವೀಡಿಯೋ ವೈರಲ್

ಕನೌಇಜ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಥಳಿಸಿರುವ ವೀಡಿಯೋ ಒಂದು ವೈರಲ್ ಆಗಿದ್ದು ಇದೀಗ ನೆಟ್ಟಿಗರು ಯಾದವ್ ಅರನ್ನು ಟ್ರೋಲ್ ಮಾಡುತ್ತಿದ್ದಾ
ಆರ್ಎಸ್ಎಸ್ ಬಿಜೆಪಿ
ಆರ್ಎಸ್ಎಸ್ ಬಿಜೆಪಿ

ಲಖನೌ: ಕನೌಇಜ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಥಳಿಸಿರುವ ವೀಡಿಯೋ ಒಂದು ವೈರಲ್ ಆಗಿದ್ದು ಇದೀಗ ನೆಟ್ಟಿಗರು ಯಾದವ್ ಅರನ್ನು ಟ್ರೋಲ್ ಮಾಡುತ್ತಿದ್ದಾರೆ.

ಕಳೆದ ವಾರ ಚಿಬ್ರಾಮಮೌದಲ್ಲಿ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರನ್ನು ಭೇಟಿಯಾಗಲು ಯಾದವ್ ತೆರಳಿದ್ದಾರೆ. ಈ ಅಪಘಾತದಲ್ಲಿ ಸುಮಾರು 24 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಜೈಪುರದಿಂದ ಹೊರಟ ಡಬಲ್ ಡೆಕ್ಕರ್ ಬಸ್ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡು ಅಪಘಾತ ಸಂಭವಿಸಿತ್ತು.

ವೀಡಿಯೋದಲ್ಲಿ ಅಖಿಲೇಶ್  ತುರ್ತು ವಾರ್ಡ್‌ನಿಂದ ಹೊರಹೋಗುವಂತೆ ವೈದ್ಯರನ್ನು ಕೇಳುತ್ತಿದ್ದು ಆತನನ್ನು ಆರ್‌ಎಸ್‌ಎಸ್-ಬಿಜೆಪಿ ವ್ಯಕ್ತಿ ಎಂದು ಆರೋಪಿಸಿದ್ದಾರೆ."ನೀವು ತುಂಬಾ ಸಣ್ಣವರು, ಸಣ್ಣ ಉದ್ಯೋಗದಲ್ಲಿದ್ದೀರಿ ನೀವು ಸರ್ಕಾರಿ ಸೇವಕರಾಗಿದ್ದೀರಿ, ಮಧ್ಯಪ್ರವೇಶಿಸಬೇಡಿ. ನೀವು ಬಿಜೆಪಿ ಅಥವಾ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರಬಹುದು ಆದರೆ ಇಲ್ಲಿ ಮೂಗು ತೂರಿಸಬೇಡಿ. ವಾರ್ಡ್‌ನಿಂದ  ಹೊರ ನಡೆಯಿರಿ"ಎಂದು ಅಖಿಲೇಶ್ ವೈದ್ಯರಿಗೆ ಹೇಳಿದ್ದಾರೆ.ಅಪಘಾತ ಸಂತ್ರಸ್ತರ ಚಿಕಿತ್ಸೆ ಮಾಡುತ್ತಿದ್ದ ತುರ್ತು ವೈದ್ಯಕೀಯ ಅಧಿಕಾರಿ ಡಾ.ಡಿ.ಎಸ್. ಮಿಶ್ರಾ ವಿರುದ್ಧ  ಅಖಿಲೇಶ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರ ಕುಟುಂಬ ಸದಸ್ಯರೊಂದಿಗೆ ಅಖಿಲೇಶ್ ಸಂವಹನ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡವರ ಕುಟುಂಬ ಸದಸ್ಯರು ನಮಗೆ ಈ ವರೆಗೆ ಸರ್ಕಾರದಿಂದ ಪರಿಹಾರದ ಹಣ ಸಿಕ್ಕಿಲ್ಲಎಂದು ಹೇಳಿಕೊಂಡಾಗ, ವೈದ್ಯರು ಮಧ್ಯಪ್ರವೇಶಿಸಿ, ಚೆಕ್‌ಗಳ ಸ್ವೀಕೃತಿಯನ್ನು ದೃಷೀಕರಿಸಿದ್ದಾರೆ. ಈ ಘಟನೆ ಮಾಜಿ ಸಿಎಂ ಹಾಗೂ ಎಸ್.ಪಿ. ಮುಖ್ಯಸ್ಥರು ಕೆರಳುವಂತೆ ಂಆಡಿದೆ.

ವೈದ್ಯರ ಹಸ್ತಕ್ಷೇಪವನ್ನು ಖಂಡಿಸಿದ ಅಖಿಲೇಶ್ , “ನೀವು ಸರ್ಕಾರಿ ವ್ಯಕ್ತಿಯಾಗಿರುವುದರಿಂದ ನೀವು ಮಾತನಾಡುವಂತಿಲ್ಲ. . ಅವರು ಏನು ಹೇಳುತ್ತಾರೆಂದು ನೀವು ನನಗೆ ವಿವರಿಸಬೇಕಾಗಿಲ್ಲ. ನೀವು ಸರ್ಕಾರದ ಪರವಾಗಿ ಮಾತನಾಡಲು ಸಾಧ್ಯವಿಲ್ಲ.  ನೀವು ಇಲ್ಲಿಂದ ದೂರ ಹೋಗಿರಿ., ಹೊರ ನಡೆಯಿರಿ" ಎಂದು ಕಿಡಿ ಕಾರಿದ್ದಾರೆ.

ಘಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಡಿ.ಎಸ್. ಮಿಶ್ರಾ ತಾವು ರೋಗಿಗಳ ಬಗೆಗೆ ಕಾಳಜಿ ಹೊಂದಿದ್ದ ಕಾರಣ ವಾರ್ಡ್ ನಲ್ಲಿದ್ದೆವು ಎಂದಿದ್ದಾರೆ. “ನಾನು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕಾರಣ ನಾನು ಅಲ್ಲಿದ್ದೆ. ರೋಗಿಯೊಬ್ಬರು ಅವರು ಪರಿಹಾರ ಚೆಕ್ ಪಡೆಯಲಿಲ್ಲ ಎಂದು ಹೇಳಿದರು, ಚೆಕ್ ನೀಡಲಾಗಿದೆ ಎಂದು ನಾನು ಸ್ಪಷ್ಟಪಡಿಸಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಅಖಿಲೇಶ್ ಕೋಪಗೊಂಡು ನನ್ನನ್ನು ವಾರ್ಡ್‌ನಿಂದ ಹೊರಹೋಗುವಂತೆ ಕೇಳಿಕೊಂಡರು " ಅವರು ಹೇಳಿದ್ದಾರೆ.

ಇದಾಗಿ ಅಖಿಲೇಶ್ ವೈದ್ಯರು ಯಾವ ಊರಿನಿಂದ ಬಂದವರೆಂದು ಕೇಳಿದ್ದಾರೆ. ಆಗ ವೈದ್ಯರು ತಾವು ಗೋರಖ್ಪುರದಿಂದ ಬಂದಿದ್ದಾಗಿ ಹೇಳಿದಾಗ ಅಖಿಲೇಶ್ ಯಾದವ್ ಅನೀವು ಬಿಜೆಪಿ / ಆರ್ಎಸ್ಎಸ್ ಜೊತೆಗಿನ ಸಂಪರ್ಕ ಹೊಂದಿದ್ದೀರಿ ಎಂದು ಆರೋಪಿಸಿದ್ದಾರೆ

ಇದಾಗಿ ಫಿರೋಜಾಬಾದ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾ ಸಂತ್ರಸ್ತರಿಗೆ ಅಖಿಲೇಶ್ ಐದು ಲಕ್ಷ ರೂ.ಗಳ ಚೆಕ್ ವಿತರಿಸಿದರೆ, 2022 ರಲ್ಲಿ ಅಧಿಕಾರಕ್ಕೆ ಬಂದರೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸುವುದಾಗಿ ಹೇಳಿದರು. ಹತ್ಯೆಗೀಡಾದವರ ಹತ್ತಿರದ ಸಂಬಂಧಿಗಳಿಗೆ ಗೆ ರಾಜ್ಯ ಸರ್ಕಾರ 2 ಲಕ್ಷ ರೂ. ಪರಿಹಾರ ಒದಗಿಸಿದ್ದರೆ ತೀವ್ರವಾಗಿ ಗಾಯಗೊಂಡವರಿಗೆ 50,000 ರೂ ಪರಿಹಾರ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com