ಕಾಶ್ಮೀರ:  ಐದು ದಿನಗಳ ಹಿಂದೆ ಹಿಮದಲ್ಲಿ ಸಿಲುಕಿದ ಯೋಧ ನಾಪತ್ತೆ

ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದರೆ.

ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿ 11 ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ  ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ  ಹಿಮದಲ್ಲಿ ಸಿಲುಕಿದ್ದಾರೆ.

ಕಾಣೆಯಾದ ಸೈನಿಕನನ್ನು ಪತ್ತೆಹಚ್ಚಲು ಭಾರತೀಯ ಸೇನೆ  ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ
2002 ರಿಂದ ಭಾರತೀಯ ಸೇನೆಯ 11ನೇ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ನೇಗಿ, ಮೂಲತಃ ಉತ್ತರಕಾಂಡದ ಡೆಹ್ರಡೂನ್ ನವರು.

ಗುಲ್ ಮಾರ್ಗ್ ಸೆಕ್ಟರ್ ನಲ್ಲಿ ಭಾರೀ ಹಿಮಪಾತವಾಗುತ್ತಿದ್ದು ರಕ್ಷಣಾ ಕಾರ್ಯಕ್ಕೆ ತೊಡಕಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com