ಪ್ರತಿಭಟನೆಗಳಿಗೆ ಪ್ರತಿಪಕ್ಷಗಳ ಒಗ್ಗಟ್ಟು ಅತಿ ಮುಖ್ಯ- ಅಮರ್ಥ್ಯ ಸೇನ್

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವಂತೆ ವಿವಿಧೆಡೆ ಪ್ರತಿಭಟನೆ ನಡೆಯುತ್ತಿರುವಂತೆ  ಯಾವುದೇ ಪ್ರತಿಭಟನೆ ಕೈಗೊಳ್ಳಲು ಪ್ರತಿಪಕ್ಷಗಳ ಒಗ್ಗಟ್ಟು ಅತಿ ಮುಖ್ಯವಾಗಿರುತ್ತದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಹೇಳಿದ್ದಾರೆ. 

Published: 14th January 2020 09:37 AM  |   Last Updated: 14th January 2020 09:37 AM   |  A+A-


Amartyasen1

ಅಮರ್ಥ್ಯ ಸೇನ್

Posted By : Nagaraja AB
Source : PTI

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವಂತೆ ವಿವಿಧೆಡೆ ಪ್ರತಿಭಟನೆ ನಡೆಯುತ್ತಿರುವಂತೆ  ಯಾವುದೇ ಪ್ರತಿಭಟನೆ ಕೈಗೊಳ್ಳಲು ಪ್ರತಿಪಕ್ಷಗಳ ಒಗ್ಗಟ್ಟು ಅತಿ ಮುಖ್ಯವಾಗಿರುತ್ತದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಹೇಳಿದ್ದಾರೆ. 

ಸಿಎಎ, ಎನ್ ಪಿಆರ್, ಎನ್ ಆರ್ ಸಿ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದಿದ್ದರೂ ಪ್ರತಿಭಟನೆಯನ್ನು ಮುಂದುವರೆಸಬೇಕು ಎಂದರು.

ಯಾವುದೇ ರೀತಿಯ ಪ್ರತಿಭಟನೆಗಳಿಗೆ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಅತಿಮುಖ್ಯ. ನಂತರ ಪ್ರತಿಭಟನೆ ಸುಲಭವಾಗುತ್ತದೆ.     
ಪ್ರತಿಭಟನೆ ಸರಿಯಾದ ಕಾರಣಕ್ಕಾಗಿ ಇದ್ದರೆ ಏಕತೆ ಮುಖ್ಯ ಎಂದಿದ್ದಾರೆ. 

ಆದರೆ ಏಕತೆ ಇಲ್ಲದಿದ್ದರೂ,  ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದರ್ಥವಲ್ಲಾ, ಏಕತೆಯು ಪ್ರತಿಭಟನೆಯನ್ನು ಸುಲಭಗೊಳಿಸುತ್ತದೆ ಆದರೆ ಏಕತೆ ಇಲ್ಲದಿದ್ದರೂ  ನಾವು ಪ್ರತಿಭಟನೆಯನ್ನು ಮುಂದುವರೆಸಬೇಕು ಮತ್ತು ಅಗತ್ಯವಾದದ್ದನ್ನು ಮಾಡಬೇಕು ಎಂದು ಸೇನ್ ಹೇಳಿದರು. 

ಇದಕ್ಕೂ ಮುನ್ ನಬಾನಿತಾ ದೆಬ್  ಸೇನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅರ್ಥಶಾಸ್ತ್ರಜ್ಞ, ವಿರೋಧಾತ್ಮಕ ತಾರ್ಕಿಕತೆಯನ್ನು ಜಗಳವಾಡುವಂತೆ ನೋಡುವುದು ದೊಡ್ಡ ತಪ್ಪು ಎಂದರು. ವಿರೋಧ ಪಕ್ಷಗಳ ಹೊಸ ಶಕ್ತಿಗಳ ಸೂಕ್ಷ್ಮತೆಗಳನ್ನು ಒತ್ತಿಹೇಳುವುದು ಅವಶ್ಯಕ. ನಾವು ಏತಕ್ಕಾಗಿ  ಪ್ರತಿಭಟಿಸುತ್ತಿದ್ದೇವೆ  ಎಂಬುದರ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಸಂವಿಧಾನದಲ್ಲಿ ಅಥವಾ ಮಾನವ ಹಕ್ಕುಗಳಲ್ಲಿ ದೊಡ್ಡ ತಪ್ಪು ಕಂಡುಬಂದಾಗ, ಪ್ರತಿಭಟಿಸಲು ಖಂಡಿತವಾಗಿಯೂ ಕಾರಣಗಳಿವೆ ಎಂದು ಅಮರ್ಥ್ಯ ಸೇನ್ ಹೇಳಿದರು.

ಕೆಲ ದಿನಗಳ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಅಮರ್ಥ್ಯ ಸೇನ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp