ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿರುವ ಮೋದಿ ಇದೀಗ ದೇಶವನ್ನು ವಿಚಲಿತಗೊಳಿಸುತ್ತಿದ್ದಾರೆ- ರಾಹುಲ್  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿದ್ದು, ಇದೀಗ ಸಿಎಎ, ಎನ್ ಆರ್ ಸಿ, ಮತ್ತು ಎನ್ಪಿಆರ್ ಮೂಲಕ ದೇಶವನ್ನು ವಿಚಲಿತಗೊಳಿಸಲಾಗುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿದ್ದು, ಇದೀಗ ಸಿಎಎ, ಎನ್ ಆರ್ ಸಿ, ಮತ್ತು ಎನ್ಪಿಆರ್ ಮೂಲಕ ದೇಶವನ್ನು ವಿಚಲಿತಗೊಳಿಸಲಾಗುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ

ಸಿಎಎ ಹಾಗೂ ಎನ್ ಆರ್ ಸಿ ಕುರಿತ ಪ್ರತಿಪಕ್ಷಗಳ ಸಭೆಯ ಬಳಿಕ ಮಾತನಾಡಿದ ಅವರು,  ದೇಶದ ಆರ್ಥಿಕತೆ ಏಕೆ ಪ್ರಪಾತಕ್ಕೆ ಇಳಿದಿದೆ, ಏಕೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ? ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಹೇಳಬೇಕಾಗಿದೆ. ವಿದ್ಯಾರ್ಥಿಗಳ ಮುಂದೆ ನಿಲ್ಲುವ ಧೈರ್ಯ ಅವರಿಗಿಲ್ಲ, ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಪೊಲೀಸರಿಲ್ಲದೆ ದೇಶಕ್ಕಾಗಿ ಏನು ಮಾಡುತ್ತಾ ಇದ್ದೀನಿ ಎಂಬುದನ್ನು ಹೇಳಲಿ ಎಂದು ಸವಾಲ್ ಹಾಕುವುದಾಗಿ ಹೇಳಿದರು. 

ದೇಶಯ ಯುವ ಜನರ ಧ್ವನಿಯನ್ನು ಅಡಗಿಸಲು ಸರ್ಕಾರ ಪ್ರಯತ್ನಸುತ್ತಿದೆ. ಯುವಕರ ಬೇಡಿಕೆಗಳು ನ್ಯಾಯಯುತವಾಗಿದೆ ಆದರೆ, ಸರ್ಕಾರ ಅದನ್ನು ಕೇಳುತ್ತಿಲ್ಲ ಎಂದರು.

ಇದಕ್ಕೂ ಮುನ್ನ ಸಿಎಎ ಹಾಗೂ ಎನ್ ಪಿ ಆರ್ ಕುರಿತಂತೆ ನವದೆಹಲಿಯಲ್ಲಿ ಸಭೆ ನಡೆಸಿದ ಪ್ರತಿಪಕ್ಷಗಳು ಈ ವಿಚಾರದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ಚರ್ಚೆ ನಡೆಸಿದವು. ಸಭೆಯಲ್ಲಿ 20 ಪ್ರತಿಪಕ್ಷಗಳು ಭಾಗವಹಿಸಿದ್ದವು ಆದರೆ, ಡಿಎಂಕೆ ಹಾಗೂ ಶಿವಸೇನಾ ಇದರಲ್ಲಿ ಪಾಲ್ಗೊಂಡಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com