ನೇಪಾಳದಲ್ಲಿ ದೊಡ್ಡ ನೆಲೆ ಹೊಂದಿರುವ ದಾವೂದ್, ಪಾಕ್ ಅಧಿಕಾರಿಗಳ ಮೂಲಕ ಕಾರ್ಯಾಚರಣೆ: ಲಕ್ಡಾವಾಲಾ 

ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾದ ಡಿ ಕಂಪನಿಯ ಮುಖ್ಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಠ್ಮಂಡುವಿನಲ್ಲಿ ದೊಡ್ಡ ನೆಲೆಯನ್ನು ಹೊಂದಿದ್ದಾನೆ ಎಂದು ಅಂಡರ್ವರ್ಲ್ಡ್ ಡಾನ್ ಮತ್ತು ಡಿ-ಕಂಪನಿಯ ಮಾಕಿ ಸದಸ್ಯ ಇಜಾಜ್ ಲಕ್ಡಾವಾಲಾ ಮುಂಬೈ ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾದ ಡಿ ಕಂಪನಿಯ ಮುಖ್ಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಠ್ಮಂಡುವಿನಲ್ಲಿ ದೊಡ್ಡ ನೆಲೆಯನ್ನು ಹೊಂದಿದ್ದಾನೆ ಎಂದು ಅಂಡರ್ವರ್ಲ್ಡ್ ಡಾನ್ ಮತ್ತು ಡಿ-ಕಂಪನಿಯ ಮಾಕಿ ಸದಸ್ಯ ಇಜಾಜ್ ಲಕ್ಡಾವಾಲಾ ಮುಂಬೈ ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ, ಅವನು ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಭಾರತದೊಳಕ್ಕೆ ವಿಕ್ರಯಿಸಲು ಪ್ರಯತ್ನಿಸುತ್ತಾನೆ. ಇದು ಗಡಿಭಾಗಗಳಲ್ಲಿ ನೇಪಾಳ ರಾಜಧಾನಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯ ಕೆಲ  ಪ್ರಮುಖ ಅಧಿಕಾರಿಗಳ ಸಹಾಯದಿಂದ  ಸಾಧ್ಯವಾಗುತ್ತಿದೆ ಎಂಬ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾನೆ.

ತಪ್ಪಿಸಿಕೊಂಡಿದ್ದ ಭೂಗತ ಫಾತಕಿ ಲಕ್ಡಾವಾಲಾನನ್ನು ಜನವರಿ 8 ರಂದು ಪಾಟ್ನಾದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ, ಕರಾಚಿಯಲ್ಲಿರುವ ದಾವೂದ್ ಇಬ್ರಾಹಿಂ ಎರಡು ನಿರ್ದಿಷ್ಟ ವಿಳಾಸಗಳನ್ನುಪೊಲೀಸ್ ರಿಮಾಂಡ್ ನಲ್ಲಿ ಈತ ಬಾಯ್ಬಿಟ್ಟಿದ್ದಾನೆ.

ಅಪರಾಧ ಶಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿಸಿದ ಎರಡು ವಿಳಾಸಗಳೆಂದರೆ- 6 ಎ, ಖಯಾಬನ್ ತಾಂಜಿಮ್ ಹಂತ -5, ರಕ್ಷಣಾ ವಸತಿ ಪ್ರದೇಶ, ಕರಾಚಿ ಮತ್ತು ಡಿ -13, ಬ್ಲಾಕ್ 4, ಕ್ಲಿಫ್ಟನ್, ಕರಾಚಿ.ಎಂದಾಗಿದೆ.ಕರಾಚಿಯ ರಕ್ಷಣಾ ವಸತಿ ಪ್ರದೇಶದಲ್ಲಿ ವಾಸಿಸುತ್ತಿರುವ ದಾವೂದ್ ಸೋದರ ಅನೀಸ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಅವರುಗಳ ವಿಳಾಸವನ್ನೂ ಆತ ಬಹಿರಂಗಪಡಿಸಿದ್ದಾನೆ.

"ಇತರ ತನಿಖಾ ಏಜೆನ್ಸಿಗಳ ಅಧಿಕಾರಿಗಳು ಸಹ ಲಕ್ಡಾವಾಲಾನನ್ನು ಪ್ರಶ್ನಿಸುತ್ತಿದ್ದು ಆತ ಡಿ-ಕಂಪನಿಯ ಎಫ್ಐಸಿಎನ್ ಮತ್ತು ಡ್ರಗ್ ದಂಧೆಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಹೊಂದಿರುವ ವ್ಯಕ್ತಿ ಎಂದು ನಾವೀ ಘಟ್ಟದಲ್ಲಿ ಹೇಳುತ್ತಿದ್ದೇವೆ" ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ಐಎಎನ್ಎಸ್ ಗೆ ತಿಳಿಸಿದ್ದಾರೆ.

ಒಮ್ಮೆ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದ ಲಕ್ಡಾವಾಲಾ ದರ್‌ಲ್ಯಾಂಡ್ಸ್‌ನ ರೋಟರ್ಡ್ಯಾಮ್ ಬಂದರಿನ ಮೂಲಕ ಯುರೋಪಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು. ಭೂಗತ ಜಗತ್ತಿನ ಸದಸ್ಯರು ಡಿ-ಕಂಪನಿಯ ಮಾದಕ ದ್ರವ್ಯ ದಂಧೆಯನ್ನು ಮೊದಲು ಇಕ್ಬಾಲ್ ಮಿರ್ಚಿ ಮತ್ತು ನಂತರ ಛೋಟಾ  ಶಕೀಲ್ ನಿರ್ವಹಿಸುತ್ತಿದ್ದರು, ಹೆಚ್ಚಿನ ಡ್ರಗ್ಸ್ ಳನ್ನು ಅಫ್ಘಾನಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗುತ್ತದೆ ಮತ್ತು ನಂತರ ಕರಾಚಿ ಬಂದರಿನ ಮೂಲಕ ಆಗ್ನೇಯ ಏಷ್ಯಾಕ್ಕೆ, ಹಾಗೆಯೇ ಯುರೋಪಿಗೆ ಕಳಿಸಲಾಗುತ್ತಿದೆ ಎಂದು ಲಕ್ಡಾವಾಲಾ ಹೇಳೀದ್ದಾನೆ. ಡಿ-ಕಂಪನಿಯು ಥೈಲ್ಯಾಂಡ್ ಮತ್ತು ಬಾಂಗ್ಲಾದೇಶದಲ್ಲಿ ಗಮನಾರ್ಹ ಹಿಡಿತವನ್ನು ಹೊಂದಿದೆ, ಅಲ್ಲಿಂದ ಭಾರತ ಸೇರಿದಂತೆ ಇತರ ಸ್ಥಳಗಳಿಗೆಡ್ರಗ್ಸ್ ಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ ಎಂಬುದಾಗಿ ಆತ ಮಾಹಿತಿ ಒದಗಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com