ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತದ ಗಡಿಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ರವಾನೆ: ಖಲಿಸ್ತಾನಿ ಉಗ್ರರಿಗೆ ಜೀವ ತುಂಬುತ್ತಿದೆ ಪಾಕಿಸ್ತಾನ

70 ಹಾಗೂ 80ರ ದಶಕದಲ್ಲಿ ಭಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಖಲಿಸ್ತಾನಿ ಭಯೋತ್ಪಾದನೆಗೆ ಮರುಜೀವ ನೀಡಲು ಮುಂದಾಗಿದೆ. ಇದಕ್ಕಾಗಿ ಭಾರತಕ್ಕೆ ಅಪಾರ ಶಸ್ತ್ರಾಸ್ತ್ರಗಳನ್ನು ದಬ್ಬುತ್ತಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. 

ನವದೆಹಲಿ: 70 ಹಾಗೂ 80ರ ದಶಕದಲ್ಲಿ ಭಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಖಲಿಸ್ತಾನಿ ಭಯೋತ್ಪಾದನೆಗೆ ಮರುಜೀವ ನೀಡಲು ಮುಂದಾಗಿದೆ. ಇದಕ್ಕಾಗಿ ಭಾರತಕ್ಕೆ ಅಪಾರ ಶಸ್ತ್ರಾಸ್ತ್ರಗಳನ್ನು ದಬ್ಬುತ್ತಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. 

ಇತ್ತೀಚೆಗೆ ಗಡಿಯಲ್ಲಿ ಪಾಕಿಸ್ತಾನದಿಂದ ಸ್ಫೋಟಕ ರವಾನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗುಪ್ತಚರ ಸಂಸ್ಥೆಗಳು ಖಲಿಸ್ತಾನಿ ಸಂಘಟನೆಗೆ ಪಾಕ್ ಕುಮ್ಮಕ್ಕು ನೀಡುತ್ತಿರುವ ಕುರಿತು ಎಚ್ಚರಿಕೆ ಗಂಟೆಮೊಳಗಿಸಿವೆ. 

ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಪರಿಶೀಲನೆ ಆರಂಭಿಸಿದೆ ಎನ್ನಲಾಗಿದೆ. ಖಲಿಸ್ತಾನಿ ಉಗ್ರ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಇಂಟನ್ ನ್ಯಾಷನಲ್ ಹಾಗೂ ಖಾಲಿಸ್ತಾನ್ ಜಿಂದಾಬಾದ್ ಪೋರ್ಸ್ ಸಂಘಟನೆಗಳಿಗೆ ಸೇರಿದ ಹಿರಿಯ ಸದಸ್ಯರನ್ನು ಇತ್ತೀಚೆಗೆ ಪಾಕಿಸ್ತಾನಕ್ಕೆ ಕರೆಸಿ, ಆ ದೇಶದ ನಿಯಂತ್ರಕರು ಸಬೆ ನಡೆಸಿದ್ದಾರೆ. ಈ ಉಗ್ರರಿಗೆ ಪಾಕಿಸ್ತಾನ ಏನಾದರೂ ತರಬೇತಿ ಶಿಬಿರವನ್ನೇನಾದರೂ ತೆರೆದಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. 

Related Stories

No stories found.

Advertisement

X
Kannada Prabha
www.kannadaprabha.com