ಎಸ್​ಸಿಒ ಶೃಂಗ ಸಭೆ: ಪಾಕ್ ಗೆ ಭಾರತ ಆಹ್ವಾನ, ಇಮ್ರಾನ್ ಖಾನ್ ಸಚಿವರನ್ನು ಕಳಿಸುವ ಸಾಧ್ಯತೆ

ಈ ವರ್ಷ ದೆಹಲಿಯಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸುವ ಸಾಧ್ಯತೆ ಇದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ನವದೆಹಲಿ: ಈ ವರ್ಷ ದೆಹಲಿಯಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸುವ ಸಾಧ್ಯತೆ ಇದೆ.

ಈ ಬಾರಿ ಎಸ್​ಸಿಒ ಶೃಂಗ ಸಭೆಯ ಆತಿಥ್ಯವಹಿಸಿರುವ ಭಾರತ, ಎಲ್ಲ ಎಂಟು ಸದಸ್ಯ ದೇಶಗಳಿಗೆ ಮತ್ತು ನಾಲ್ಕು ವೀಕ್ಷಕ ದೇಶಗಳಿಗೂ ಆಹ್ವಾನ ನೀಡಲಾಗುವುದು ಎಂದು ಗುರುವಾರ ಹೇಳಿದೆ.

ಎಲ್ಲ ಎಂಟು ದೇಶಗಳು ಮತ್ತು ನಾಲ್ಕು ವೀಕ್ಷಕ ದೇಶಗಳಿಗೆ ಹಾಗೂ ಇತರೆ ಅಂತರಾಷ್ಟ್ರೀಯ ಪಾಲುದಾರರಿಗೂ ಆಹ್ವಾನ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಇನ್ನು ಇಸ್ಲಾಮಾಬಾದ್ ನ ಉನ್ನತ ಮೂಲಗಳ ಪ್ರಕಾರ, ಇಮ್ರಾನ್ ಖಾನ್ ಅವರು ತಮ್ಮ ಬದಲು ಸಚಿವರೊಬ್ಬರನ್ನು ತಮ್ಮ ಪ್ರತಿನಿಧಿಯಾಗಿ ಭಾರತಕ್ಕೆ ಕಳುಹಿಸಲಿದ್ದಾರೆ.

ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್, ಉಜಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಎಸ್​ಸಿಒನ ಎಂಟು ಸದಸ್ಯ ರಾಷ್ಟ್ರಗಳಾಗಿವೆ. ಅಘ್ಗಾನಿಸ್ತಾನ, ಇರಾನ್,  ಬೆಲಾರಸ್ ಮತ್ತು ಮಂಗೊಲಿಯಾ ನಾಲ್ಕು ವೀಕ್ಷಕ ರಾಷ್ಟ್ರಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com