ಕೇಳಿದ ತಕ್ಷಣ ಅಂಗೀಕರಿಸಲು ನಾನೇನು ರಬ್ಬರ್ ಸ್ಟ್ಯಾಂಪ್ ಅಲ್ಲ: ಪಿಣರಾಯಿ ವಿಜಯನ್ ವಿರುದ್ಧ ಕಿಡಿಕಾರಿದ ಕೇರಳ ರಾಜ್ಯಪಾಲ

ಅಂಗೀಕಾರ ಪಡೆಯದೆಯೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್
ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್

ಅಂಗೀಕಾರವಿಲ್ಲದೆ ಪೌರತ್ವ ಕಾಯ್ಜೆ ವಿರುದ್ದ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ: ಸಿಎಂ ಪಿಣರಾಯಿ ವಿರುದ್ಧ ಹರಿಹಾಯ್ದ ರಾಜ್ಯಪಾಲ

ತಿರುವನಂತಪುರ: ಅಂಗೀಕಾರ ಪಡೆಯದೆಯೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ತಮ್ಮ ಅಂಗೀಕಾರ ಪಡೆಯದೆಯೇ ರಾಜ್ಯ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂದು ಹೇಳಿದ್ದಾರೆ. 

ಎಲ್ಲದಕ್ಕೂ ಕಾನೂನಿನ ಗಡಿಯಿರುತ್ತದೆ. ನಾನಾಗಲೀ ಅಥವಾ ಯಾರೇ ಆದರೂ ಕಾನೂನಿಗಿಂತಲೂ ದೊಡ್ಡವರಲ್ಲ. ನ್ಯಾಯಾಂಗದ ವಿರುದ್ಧ ನಾನು ನಡೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ನಾನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿರುವುದರಿಂದ ರಾಜ್ಯ ಸರ್ಕಾರ ನನಗೆ ಮೊದಲು ಮಾಹಿತಿ ನೀಡಬೇಕಿತ್ತು. ಆದರೆ, ನನ್ನ ಅಂಗೀಕಾರವಿಲ್ಲದೆಯೇ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದೆ. ಪತ್ರಿಕೆ ಹಾಗೂ ಕೆಲ ಮಾಧ್ಯಮಗಳ ಮೂಲಕ ನಾನು ಮಾಹಿತಿ ತಿಳಿದುಕೊಂಡಿದ್ದೇನೆ. ಸರ್ಕಾರದಲ್ಲಿರುವ ಕೆಲವರು ಕಾನೂನಿಗಿಂತಲೂ ಮೇಲಿದ್ದೇವೆಂದು ತಿಳಿದುಕೊಂಡಿದ್ದಾರೆಂದು ತಿಳಿಸಿದ್ದಾರೆ. 

ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕೇರಳ ಸಂಪುಟ ಅನುಮೋದನೆಗೊಳಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಗೀಕಾರ ನೀಡಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ನಾನು ಸಂವಿಧಾನ ನನ್ನನ್ನು ರಬ್ಬರ್ ಸ್ಟ್ಯಾಂಪ್ ಎಂದು ನೋಡಬಾರದು ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನನ್ನ ಚಿಂತನೆ ಹಾಗೂ ಬುದ್ಧಿಯನ್ನು ಉಪಯೋಗಿಸುತ್ತೇನೆ. ಯಾವುದಕ್ಕೇ ಅನುಮತಿ ನೀಡುವುದಕ್ಕೂ ಮುನ್ನ ನನಗೆ ಚಿಂತನೆ ನಡೆಸಲು ಕಾಲಾವಕಾಶದ ಅಗತ್ಯವಿದೆ. ಇದ್ದಕ್ಕಿದ್ದಂತೆ ಅಧಿವೇಶನ ನಡೆಸುವ ಅಗತ್ಯವಾದರೂ  ಏನಿತ್ತು? ಈ ಬಗ್ಗೆ ನಾನು ಕೆಲ ಪ್ರಶ್ನೆಗಳ ಕೇಳಿದ್ದೆ. ಅವುಗಳಿಗೆ ನನಗೆ ಉತ್ತರ ಬೇಕಿದೆ. ಇದಾದ ಬಳಿಕ ನಾನು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಸಹಿ ಹಾಕುವುದಿಲ್ಲ ನಾನು ಎಂದಿಗೂ ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com