ನಿರ್ಭಯಾ ಅತ್ಯಾಚಾರಿಗಳಿಗೆ ನೇಣು: ತಿಹಾರ್ ಜೈಲಿನಿಂದ ವರದಿ ಕೇಳಿದ ನ್ಯಾಯಾಲಯ

2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿಗದಿಯಾಗಿರುವ ಮರಣದಂಡನೆ  ಕುರಿತಂತೆ ನಾಳೆಯೊಳಗೆ ವರದಿಯೊಂದನ್ನು ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿಗೆ ನಿರ್ದೇಶಿಸಿದೆ. 

Published: 16th January 2020 05:37 PM  |   Last Updated: 16th January 2020 06:27 PM   |  A+A-


NirbhayaMother1

ವಕೀಲರೊಂದಿಗೆ ನಿರ್ಭಯಾ ತಾಯಿ

Posted By : Nagaraja AB
Source : PTI

ನವದೆಹಲಿ: 2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿಗದಿಯಾಗಿರುವ ಮರಣದಂಡನೆ  ಕುರಿತಂತೆ ನಾಳೆಯೊಳಗೆ ವರದಿಯೊಂದನ್ನು ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿಗೆ ನಿರ್ದೇಶಿಸಿದೆ. 

ಜನವರಿ 22ಕ್ಕೆ  ಮರಣ ದಂಡನೆ ನಿಗದಿಯಾಗಿರುವಂತೆ ಬಾಕಿ ಉಳಿದಿರುವ ಪ್ರಕ್ರಿಯೆಗಳ ಕುರಿತಂತೆ ದೆಹಲಿ ಸರ್ಕಾರಕ್ಕೆ ಜೈಲಿನ ಆಡಳಿತ ವರ್ಗ ತಿಳಿಸಿದ ನಂತರ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ದೆಹಲಿ ಜೈಲಿನ ನಿಯಮ 840 ಪ್ರಕಾರ ಒಂದು ವೇಳೆ ಮರಣ ದಂಡನೆ ದಿನಾಂಕವನ್ನು ಮುಂದೂಡಬೇಕಾದರೆ ತಿಹಾರ ಆಡಳಿತ ವರ್ಗಾ ದೆಹಲಿ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆಯಬೇಕಾಗುತ್ತದೆ.  ನಾಳೆ ಮಧ್ಯಾಹ್ನ 3-30ಕ್ಕೆ ಮತ್ತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.

ಕ್ಷಮಾದಾನ ಅರ್ಜಿ ಬಗ್ಗೆ  ಮಾತ್ರ ಮಾಹಿತಿ ನೀಡಲಾಗಿದೆ. ನಿಯಮ 840ನ್ನು ಪಾಲಿಸಲಾಗಿದೆಯೇ? ಎಂದು  ನ್ಯಾಯಾಲಯ ಉಲ್ಲೇಖಿಸಿತ್ತು. ಮತ್ತೊಂದೆಡೆ ಅತ್ಯಾಚಾರಿಗಳ ಪೈಕಿ ಒಬ್ಬನಾಗಿದ್ದ ಮುಕೇಶ್ ಕುಮಾರ್  ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ   ವಜಾಗೊಳಿಸಿದೆ

ಮುಕೇಶ್ ಕುಮಾರ್ ಸಲ್ಲಿಸಿರುವ ಕ್ಷಮಾದಾನ ಅರ್ಜಿ ದೆಹಲಿಯ ಗೃಹ ಸಚಿವಾಲಯನ್ನು ತಲುಪಿದ್ದು, ಅದನ್ನು ಶೀಘ್ರದಲ್ಲಿಯೇ ರಾಷ್ಟ್ರಪತಿಗಳಿಗೆ ರವಾನಿಸಲಾಗುತ್ತದೆ. ರಾಷ್ಟ್ರಪತಿ ಈ ಕ್ಷಮಾದಾನ ಅರ್ಜಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp