ಏಪ್ರಿಲ್ 1ರಿಂದ ಎನ್'ಪಿಆರ್ ಆರಂಭ: ತಪ್ಪು ಮಾಹಿತಿ ನೀಡಿದವರಿಗೆ ರೂ.1000 ದಂಡ

ಏಪ್ರಿಲ್ 1 ರಿಂದ ದೇಶದಾದ್ಯಂತ ಎನ್'ಪಿಆರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವುದು, ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ ರೂ.1000ಕ ದಂಟ ತೆರಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Published: 17th January 2020 08:34 AM  |   Last Updated: 17th January 2020 08:34 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ನವದೆಹಲಿ: ಏಪ್ರಿಲ್ 1 ರಿಂದ ದೇಶದಾದ್ಯಂತ ಎನ್'ಪಿಆರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವುದು, ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ ರೂ.1000ಕ ದಂಟ ತೆರಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. 

ಈ ಕುರಿತು ಗೃಹ ಸಚಿವಾಲಯ ಮಾಹಿತಿ ನೀಡಿದ್ದು, ನಾಗರೀಕತ್ವ ನಿಯಮ-17ರ ಪ್ರಕಾರ ತಪ್ಪು ಮಾಹಿತಿ ನೀಡಿದವರಿಗೆ ರೂ.1 ಸಾವಿರ ದಂಡ ಹಾಕಲು ಅವಕಾಶವಿದೆ ಎಂದು ಹೇಳಿದೆ. ಆದರೆ, 2011 ಹಾಗೂ 2015ರಲ್ಲಿ ನಡೆದ ಎನ್'ಪಿಆರ್ ಪ್ರಕ್ರಿಯೆ ವೇಳೆ ಈ ನಿಯಮವನ್ನು ಹೆಚ್ಚು ಬಳಕೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. 

ಇತ್ತೀಚೆಗೆ ನಡೆದ ಎನ್'ಪಿಆರ್, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಲೇಖಕಿ ಅರುಂಧತಿ ರಾಯ್ ಅವರು, ಎನ್'ಪಿಆರ್ ಗಣತಿದಾರರು ನಿಮ್ಮ ಮನೆಗೆ ಬಂದರೆ ಅವರಿಗೆ ತಪ್ಪು ಮಾಹಿತಿ ನೀಡಿ. ನಿಮ್ಮ ಹೆಸರನ್ನು ರಂಗಾ-ಬಿಲ್ಲಾ, ಕುಂಗ್ ಫು-ಕಟ್ಟಾ ಎಂದು ಬರೆಸಿರಿ ಎಂದು ಕರೆ ನೀಡಿದ್ದರು. ಈಗಾಗಲೇ ಎನ್'ಪಿಆರ್'ಗೆ ಕೇರಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಬಹಿಷ್ಕಾರ ಹಾಕಿವೆ. 

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp