ಮಹಾತ್ಮ ಗಾಂಧಿ "ಭಾರತ ರತ್ನ"ಕ್ಕಿಂತ ದೊಡ್ಡ ವ್ಯಕ್ತಿ: ಸುಪ್ರೀಂ ಕೋರ್ಟ್

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು “ಭಾರತ ರತ್ನ” ಪುರಸ್ಕಾರವನ್ನೂ ಮೀರಿದ ಮಹಾನ್ ವ್ಯಕ್ತಿ ಎಂದು  ದೇಶದ ಅತ್ಯುನ್ನತ ನ್ಯಾಯ ಸ್ಥಾನ ಹೇಳಿದೆ.

Published: 17th January 2020 04:47 PM  |   Last Updated: 17th January 2020 04:47 PM   |  A+A-


Mahatma Gandhi

ಮಹಾತ್ಮಾ ಗಾಂಧಿ

Posted By : Lingaraj Badiger
Source : UNI

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು “ಭಾರತ ರತ್ನ” ಪುರಸ್ಕಾರವನ್ನೂ ಮೀರಿದ ಮಹಾನ್ ವ್ಯಕ್ತಿ ಎಂದು  ದೇಶದ ಅತ್ಯುನ್ನತ ನ್ಯಾಯ ಸ್ಥಾನ ಹೇಳಿದೆ.

ಮಹಾತ್ಮಾ ಗಾಂಧಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಸೂಚನೆ ನೀಡಬೇಕೆಂದು ಸಲ್ಲಿಸಿದ್ದ ಆರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಮಹಾತ್ಮ ಗಾಂಧಿ "ಭಾರತ ರತ್ನ"ಕ್ಕಿಂತ ದೊಡ್ಡ ವ್ಯಕ್ತಿ ಎಂದು ಹೇಳಿದೆ.

ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.   ಗಾಂಧಿ ಅವರನ್ನು ಜನರು ಮಹೋನ್ನತ ಸ್ಥಾನದಲ್ಲಿರಿಸಿ ರಾಷ್ಟ್ರಪಿತ ಎಂದು ಕರೆಯುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅಭಿಪ್ರಾಯಪಟ್ಟರು. ಗಾಂಧಿಜೀ ಮಹಾನ್ ವ್ಯಕ್ತಿ, ಅವರಿಗಿರುವ ಅನನ್ಯತೆ ಅತ್ಯಂತ ದೊಡ್ಡದು ಎಂದು ಹೇಳಿದರು.

ದೇಶದಲ್ಲಿ ಭಾರತರತ್ನ ಪುರಸ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರ. ಆದರೆ, ಭಾರತ ರತ್ನ ಪುರಸ್ಕಾರ ಕ್ಕಿಂತ ಗಾಂಧೀಜಿ ಹೊಂದಿರುವ ಅನನ್ಯತೆ ಮಹೋನ್ನತವಾದದ್ದು.  ಈ ಹಿಂದೆ ಈ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್  ಗಳನ್ನು  ನ್ಯಾಯಾಲಯ ತಿರಸ್ಕರಿಸಿದೆ.

ಗಾಂಧಿಜೀಗೆ ಭಾರತ ರತ್ನ ನೀಡುವುದೆಂದರೆ ಅವರನ್ನು, ಅವರ ಸೇವೆಗಳನ್ನು ಕಡಿಮೆ ಅಂದಾಜು ಮಾಡಿದಂತಾಗುತ್ತದೆ ಎಂದು  ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp