ಅಮೆರಿಕಾ ಮೂಲದ ಸುನಿತಾ ವಿಶ್ವನಾಥನ್ ಅಯೋಧ್ಯೆ ಭೇಟಿಗೆ ತಡೆ

ನ್ಯೂಯಾರ್ಕ್ ಮೂಲದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯನ್ನು ನಡೆಸುತ್ತಿರುವ ಸುನೀತಾ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.

Published: 17th January 2020 02:25 PM  |   Last Updated: 17th January 2020 02:25 PM   |  A+A-


Ayodhye

ಅಯೋಧ್ಯೆ

Posted By : Shilpa D
Source : The New Indian Express

ಅಯೋಧ್ಯೆ: ಅಮೆರಿಕಾ ಮೂಲದ ಭಾರತೀಯ ಹೋರಾಟಗಾರ್ತಿ ಸುನಿತಾ ವಿಶ್ವನಾಥನ್ ಅವರ ಅಯಧ್ಯೆ ಭೇಟಿಗೆ ತಡೆ ನೀಡಲಾಗಿದೆ.

ನ್ಯೂಯಾರ್ಕ್ ಮೂಲದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯನ್ನು ನಡೆಸುತ್ತಿರುವ ಸುನೀತಾ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.

ಮ್ಯಾಗಸ್ಸೆ ಪ್ರಶಸ್ಕಿ ಪುರಸ್ಕೃತ ಸಂದೀಪ್ ಪಾಂಡೆ ಅವರೊಂದಿಗೆ ಸುನಿತಾ  ಅವರಿದ್ದ ಕಾರನ್ನು ತಡೆದ, ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. 

ಅಯೋಧ್ಯೆಯಲ್ಲಿರುವ ಮಹಾಂತ್ ಯುಗಳ್ ಕಿಶೋರ್ ಶರಣ್ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದರು, ಆದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂಬ ಹಿನ್ನೆಲೆಯಲ್ಲಿ  ಅವರ ಭೇಟಿಗೆ ತಡೆಯೊಡ್ಡಲಾಗಿದೆ. 

ನಾನು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಬಂಂದಿಲ್ಲ, ಒಬ್ಬ ಹಿಂದೂವಾಗಿ ದೇವಾಲಯಕ್ಕೆ ಭೇಟಿ ನೀಡಲು ಬಂದಿದ್ದೇನೆ ಆದರೆ ನನಗೆ ಸ್ವಾಮೀಜಿ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp