5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ: ಇಬ್ಬರು ದೋಷಿಗಳೆಂದು 6 ವರ್ಷಗಳ ನಂತರ ತೀರ್ಪು!  

2013 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ದೋಷಿಗಳೆಂದು ಪೋಸ್ಕೋ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 
5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ: ಇಬ್ಬರು ದೋಷಿಗಳೆಂದು 6 ವರ್ಷಗಳ ನಂತರ ತೀರ್ಪು!
5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ: ಇಬ್ಬರು ದೋಷಿಗಳೆಂದು 6 ವರ್ಷಗಳ ನಂತರ ತೀರ್ಪು!

ನವದೆಹಲಿ: 2013 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ದೋಷಿಗಳೆಂದು ಪೋಸ್ಕೋ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 

ಈ ಪ್ರಕರಣ ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಎಂದು ಕೋರ್ಟ್ ತೀರ್ಪು ಪ್ರಟಿಸುವಾಗ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ನರೇಶ್ ಕುಮಾರ್ ಮಲ್ಹೋತ್ರಾ ಆರೋಪಿಗಳಾದ ಮನೋಜ್ ಶಾ ಹಾಗೂ ಪ್ರದೀಪ್ ಕುಮಾರ್ ನ್ನು ದೋಷಿಗಳೆಂದು ತೀರ್ಪು ನೀಡಿದ್ದಾರೆ. 

2013 ರ ಏ.15 ರಂದು ದೆಹಲಿಯ ಗಾಂಧಿ ನಗರ ಪ್ರದೇಶದಲ್ಲಿ ಮನೋಜ್ ಶಾ ಹಾಗೂ ಪ್ರದೀಪ್ ಕುಮಾರ್ 5 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ವಸ್ತುಗಳನ್ನು ತುರುಕಿದ್ದರು. ಮನೋಜ್ ಶಾ ರೂಮ್ ನಲ್ಲಿ ಈ ಘಟನೆ ನಡೆದಿತ್ತು. ಮಗುವನ್ನು ಅಲ್ಲೇ ಬಿಟ್ಟು ಈ ಇಬ್ಬರೂ ಪರಾರಿಯಾಗಿದ್ದರು. 40 ಗಂಟೆಗಳ ನಂತರ ಮಗುವನ್ನು ರಕ್ಷಿಸಲಾಗಿತ್ತು. 

6 ವರ್ಷಗಳ ನಂತರ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಕೊನೆಗೂ ನ್ಯಾಯ ಸಿಕ್ಕಿರುವುದಕ್ಕೆ ಮಗುವಿನ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳಲ್ಲಿ ಪ್ರಕರಣದ ತೀರ್ಪು ಬರಬೇಕಿತ್ತು. ಆದರೆ ಆರು ವರ್ಷವಾಗಿದೆ. ಈಗ ನ್ಯಾಯ ಸಿಕ್ಕಿರುವುದಕ್ಕೆ ಸಮಾಧಾನವಿದೆ ಎಂದು ಪೋಷಕರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com