ಲೆಫ್ಟಿನೆಂಟ್ ಜನರಲ್ ಸೈನಿ ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥ

ದಕ್ಷಿಣ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಅವರು ಜನವರಿ 25ರಂದು ಭಾರತೀಯ ಸೇನೆಯ ಹೊಸ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಎಸ್ ಕೆ ಸೈನಿ
ಎಸ್ ಕೆ ಸೈನಿ

ನವದೆಹಲಿ: ದಕ್ಷಿಣ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಅವರು ಜನವರಿ 25ರಂದು ಭಾರತೀಯ ಸೇನೆಯ ಹೊಸ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
 
ಲೆಫ್ಟಿನೆಂಟ್ ಜನರಲ್ ಎಂ.ಎಂ.ನಾರವನೆ ಸೇನಾ ಮುಖ್ಯಸ್ಥರಾದ ನಂತರ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಹುದ್ದೆ ಖಾಲಿಯಾಗಿತ್ತು. ಜನರಲ್ ಬಿಪಿನ್ ರಾವತ್ ಅವರ ಸೇನಾ ಮುಖ್ಯಸ್ಥರಾಗಿ ಡಿಸೆಂಬರ್ 31 ರಂದು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಈ ನೇಮಕಾತಿ ನಡೆದಿದೆ. 

ಸೈನಿಕ್ ಸ್ಕೂಲ್ ಕಪುರ್ತಲಾ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿಎ) ಯ ಹಳೆಯ ವಿದ್ಯಾರ್ಥಿ, ಲೆಫ್ಟಿನೆಂಟ್ ಜನರಲ್ ಸೈನಿ ಅವರನ್ನು ಜೂನ್ 1981ರಲ್ಲಿ ಜಾಟ್ ರೆಜಿಮೆಂಟ್ ಗೆ ನಿಯೋಜಿಸಲಾಗಿತ್ತು. 

ಲೆಫ್ಟಿನೆಂಟ್ ಜನರಲ್ ಸೈನಿ ರಾಷ್ಟ್ರೀಯ ಭದ್ರತಾ  ಪಡೆ (ಎನ್ಎಸ್ ಜಿ) ತರಬೇತಿ ಕೇಂದ್ರದಲ್ಲಿ ಶಸ್ತ್ರಾಸ್ತ್ರ ತರಬೇತಿದಾರ, ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಿರಿಯ ನಿರ್ದೇಶಕ ಸಿಬ್ಬಂದಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com