ಸಾವರ್ಕರ್ ವಿರೋಧಿಸುವವರನ್ನು ಎರಡು ದಿನ ಅಂಡಮಾನ್ ಜೈಲಲ್ಲಿ ಹಾಕಬೇಕು: ಸಂಜಯ್ ರಾವತ್ 

ಪ್ರಬಲ ಹಿಂದೂತ್ವ ಪ್ರತಿಪಾದಕ ವೀರ ಸಾವರ್ಕರ್  ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುವವರನ್ನು ಎರಡು ದಿನಗಳ ಕಾಲ ಅಂಡಮಾನ್ ಜೈಲಲ್ಲಿ ಹಾಕಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

Published: 18th January 2020 02:37 PM  |   Last Updated: 18th January 2020 02:48 PM   |  A+A-


Sanjay_Raut1

ಸಂಜಯ್ ರಾವತ್

Posted By : Nagaraja AB
Source : The New Indian Express

ಮುಂಬೈ: ಪ್ರಬಲ ಹಿಂದೂತ್ವ ಪ್ರತಿಪಾದಕ ವೀರ ಸಾವರ್ಕರ್  ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುವವರನ್ನು ಎರಡು ದಿನಗಳ ಕಾಲ ಅಂಡಮಾನ್ ಜೈಲಲ್ಲಿ ಹಾಕಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ವೀರ ಸಾವರ್ಕರ್ ಅವರಿಗೆ ಯಾವಾಗಲೂ ನಾವು ಗೌರವ ನೀಡುತ್ತೇವೆ. ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುವವರನ್ನು ವೀರ ಸಾರ್ವಕರ್ ಅವರನ್ನು ಇಡಲಾಗಿದ್ದ ಅಂಡಮಾನ್ ಜೈಲಿನಲ್ಲಿ ಎರಡು ದಿನಗಳ ಕಾಲ ಹಾಕಬೇಕು. ಆಗಲೇ ಅವರಿಗೆ ವೀರ ಸಾವರ್ಕರ್ ಅವರ ತ್ಯಾಗ ಹಾಗೂ ದೇಶಕ್ಕಾಗಿ ನೀಡಿದ ಕೊಡುಗೆ ಅರ್ಥವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅನೇಕ ಮುಖಂಡರು ರಾಜಕೀಯವನ್ನು ಬದಿಗೊತ್ತಿ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಪ್ರಶಸ್ತಿಗಾಗಿ ಶಿಫಾರಸುಗಳನ್ನು ನಿರಂತರವಾಗಿ ಸ್ವೀಕರಿಸಲಾಗುತ್ತಿದೆ. ಆದರೆ, ಇಂತಹ ಶಿಫಾರಸು ಅಗತ್ಯ ಇರುವುದಿಲ್ಲ ಎಂದು ಗೃಹ ಸಚಿವಾಲಯ ಲೋಕಸಭೆಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಿಳಿಸಿತ್ತು. 

Stay up to date on all the latest ರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp