ಜೆಎನ್ ಯು ಆಡಳಿತ ಮಂಡಳಿಯಿಂದ ತಾರತಮ್ಯ: ಎಸ್ ಸಿ, ಎಸ್ ಟಿ ಶಿಕ್ಷಕರ ಆರೋಪ

ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ದುರ್ಬಲ ವರ್ಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಆಡಳಿತ ಮಂಡಳಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಅಧ್ಯಾಪಕರ ನಿಯೋಗವೊಂದು ಆರೋಪಿಸಿದೆ
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ದುರ್ಬಲ ವರ್ಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಆಡಳಿತ ಮಂಡಳಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಅಧ್ಯಾಪಕರ ನಿಯೋಗವೊಂದು ಆರೋಪಿಸಿದ್ದು, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಂತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ಬಳಿ ಮನವಿ ಮಾಡಿಕೊಂಡಿದೆ.

ನಿಯೋಗದೊಂದಿಗಿನ  ಸಭೆ ಬಳಿಕ ಮಾತನಾಡಿದ ರಾಮ್ ವಿಲಾಸ್ ಪಾಸ್ವನ್, ನಿಯೋಗ ಮಾಡಿರುವ ಆರೋಪ ಗಂಭೀರವಾಗಿದ್ದು, ಅವುಗಳನ್ನು ಪರಿಶೀಲಿಸಬೇಕಾಗಿದೆ ಎಂದರು.

ಇತ್ತೀಚಿನ ಶುಲ್ಕ ಹೆಚ್ಚಳ ಮತ್ತು ಸೀಟುಗಳ ಕಡಿತವು ಈ ಹಿಂದುಳಿದ ಸಮುದಾಯಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಮತ್ತು ಮಾನದಂಡ ಇದ್ದರೂ  ಎಸ್‌ಸಿ ಮತ್ತು ಎಸ್‌ಟಿ ಶಿಕ್ಷಕರಿಗೆ ಸರಿಯಾದ ಬಡ್ತಿ ಸಿಗುತ್ತಿಲ್ಲ ಎಂದು ಅವರು ಹೇಳಿರುವುದಾಗಿ ಪಾಸ್ವನ್ ತಿಳಿಸಿದರು.

ಸಮರ್ಥ ಅಭ್ಯರ್ಥಿಗಳು ಲಭ್ಯವಿದ್ದರೂ ಈ ಸಮುದಾಯಗಳಿಗೆ  ಕಾಯ್ದಿರಿಸಿದ ಬೋಧನಾ ಹುದ್ದೆಗಳು ಖಾಲಿ ಉಳಿದಿವೆ ಎಂದು ಗಂಭೀರವಾದಂತಹ ಆರೋಪಗಳನ್ನು ನಿಯೋಗ ಮಾಡಿದ್ದು, ಗಮನ ನೀಡಲಾಗುವುದು ಎಂದು ಅವರು ಹೇಳಿದರು. 

ಕುಲಪತಿ ಎಂ. ಜಗದೀಶ್ ಕುಮಾರ್ ಮುಖ್ಯಸ್ಥರಾಗಿರುವ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಎಸ್. ಸಿ. ಎಸ್. ಟಿ ವರ್ಗಕ್ಕೆ ಸೇರಿದ  ಬೋಧನ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಾರತಮ್ಯವನ್ನು ಎದುರಿಸುತ್ತಿರುವುದಾಗಿ ಮನವಿ ಪತ್ರದಲ್ಲಿ ದೂರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com