’ತಸ್ಲಿಮಾ ನಸ್ರಿನ್, ಅದ್ನಾನ್ ಸಮಿ ಸೇರಿ ಕಳೆದ 6 ವರ್ಷಗಳಲ್ಲಿ 3000 ನಿರಾಶ್ರಿತರಿಗೆ ಭಾರತೀಯ ಪೌರತ್ವ’  

ಸಿಎಎ-2019 ರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದು, ಪಾಕಿಸ್ತಾನದಿಂದ ಬಂದಿರುವ 2838 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದಿದ್ದಾರೆ.

Published: 19th January 2020 06:05 PM  |   Last Updated: 19th January 2020 06:05 PM   |  A+A-


Over 3000 refugees given Indian citizenship in last 6 years including Adnan Sami, Taslima Nasreen: Sitharaman

’ತಸ್ಲಿಮಾ ನಸ್ರಿನ್, ಅದ್ನಾನ್ ಸಮಿ ಸೇರಿ ಕಳೆದ 6 ವರ್ಷಗಳಲ್ಲಿ 3000 ನಿರಾಶ್ರಿತರಿಗೆ ಭಾರತೀಯ ಪೌರತ್ವ’

Posted By : Srinivas Rao BV
Source : Online Desk

ಚೆನ್ನೈ; ಸಿಎಎ-2019 ರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದು, ಪಾಕಿಸ್ತಾನದಿಂದ ಬಂದಿರುವ 2838 ಜನರಿಗೆ ಕಳೆದ 6 ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನದಿಂದ ಬಂದಿದ್ದ 914 ಜನರಿಗೆ, ಬಾಂಗ್ಲಾದಿಂದ ಶರಣಾಗತಿ ಬಯಸಿ ಬಂದ 172 ಜನರು (ಮುಸ್ಲಿಮರೂ ಸೇರಿದಂತೆ) ಒಟ್ಟಾರೆ 2838 ಜನರಿಗೆ ಕಳೆದ ಆರು ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ. 1964 ರಿಂದ 2008 ವರೆಗೆ ಶ್ರೀಲಂಕಾದಿಂದ ಬಂದಿರುವ 4,00,000 ತಮಿಳಿರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಚೆನ್ನೈ ನಲ್ಲಿ ಸೀತಾರಾಮನ್ ಮಾಹಿತಿ ನೀಡಿದ್ದಾರೆ. 

2014 ವರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಬಂದಿದ್ದ 566 ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಲಾಗಿತ್ತು. 2016-18 ರ ಮೋದಿ ಸರ್ಕಾರದ ನೇತೃತ್ವದಲ್ಲಿ 1595 ಪಾಕಿಸ್ತಾನಿ ವಲಸಿಗರು, 391 ಅಫ್ಘಾನಿಸ್ತಾನ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇದೇ ವೇಳೆಯಲ್ಲಿ ಅದ್ನಾನ್ ಸಮಿ, ತಲ್ಸಿಮಾ ನಸ್ರಿನ್ ಅವರಿಗೂ ಪೌರತ್ವ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp