ಮೋದಿ ಕಳ್ಳ ಹೇಳಿಕೆ ವಿವಾದ: ರಾಹುಲ್ ಗೆ ರಾಂಚಿ ಕೋರ್ಟ್ ನಿಂದ ಸಮನ್ಸ್ 

ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಂಚಿ ಸಿವಿಲ್ ನ್ಯಾಯಾಲಯವೊಂದು ಸಮನ್ಸ್ ನೀಡಿದೆ. ಫೆಬ್ರವರಿ 22ಕ್ಕೂ ಮುಂಚಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಂಚಿ ಸಿವಿಲ್ ನ್ಯಾಯಾಲಯವೊಂದು ಸಮನ್ಸ್ ನೀಡಿದೆ. ಫೆಬ್ರವರಿ 22ಕ್ಕೂ ಮುಂಚಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜನವರಿ 18 ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಕೋರ್ಟ್ ಆದೇಶಿಸಿತ್ತು.

ಕಳೆದ ವರ್ಷ ಮಾರ್ಚ್ 23 ರಂದು ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದರು.  ನಿರಾವ್ ಮೋದಿ , ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ  ಸರ್ ನೇಮ್ ಒಂದೇ ಆಗಿದೆ.  ಈ ಎಲ್ಲಾ ಕಳ್ಳರ ಸರ್ ನೇಮ್ ಸಾಮಾನ್ಯವಾಗಿ ಮೋದಿಯಾಗಿ ಹೇಗೆ ಬಂದಿತು? ಇಂತಹ ಮೋದಿಗಳು ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ ಎಂದು ರಾಹುಲ್ ಹೇಳಿದ್ದರು.

ಈ ಹೇಳಿಕೆ ವಿರುದ್ಧ ಮಧ್ಯಪ್ರದೇಶದ ಭೂಪಾಲ್ ನಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಕೂಡಾ ಪ್ರದೀಪ್ ಮೋದಿ ಎಂಬವರು ದೂರು ದಾಖಲಿಸಿದ್ದರು. ಸಂಬಂಧಿತ ವ್ಯಕ್ತಿಗೆ ಅಂತಹ ಹೇಳಿಕೆ ನೀಡಬೇಕು.ಅದರ ಬದಲು ಸಮುದಾಯದ ಬಗ್ಗೆ ಮಾತನಾಡುವುದು ಆಕ್ಷೇಪಾರ್ಹವಾಗಿರುವುದರಿಂದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿರುವುದಾಗಿ ದೂರುದಾರರು ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ಬೆಂಬಲ ನೀಡಿರುವ ಕಾಂಗ್ರೆಸ್, ದೇಶ ಬಿಟ್ಟು ಪಲಾಯನವಾಗಿರುವ ಲಲಿತ್ ಮೋದಿ, ನೀರಾವ್ ಮೋದಿ ಅವರನ್ನು ದೇಶಕ್ಕೆ ಕರೆತಂದು ನ್ಯಾಯ ಒದಗಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com