ಆಂಧ್ರ ರಾಜಧಾನಿ ವಿಕೇಂದ್ರೀಕರಣ ಬೆಂಬಲಿಸಿ ವೈಎಸ್ಆರ್ ಪಿಯಿಂದ ಬೃಹತ್‍ ಮೆರವಣಿಗೆ    

ಆಂಧ್ರ ರಾಜಧಾನಿ ವಿಕೇಂದ್ರೀಕರಣದ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಬೆಂಬಲಿಸಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‍ ಪಿ) ಭಾನುವಾರ ಇಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. 
ಆಂಧ್ರ ರಾಜಧಾನಿ ವಿಕೇಂದ್ರೀಕರಣ ಬೆಂಬಲಿಸಿ ವೈಎಸ್ಆರ್ ಪಿಯಿಂದ ಬೃಹತ್‍ ಮೆರವಣಿಗೆ
ಆಂಧ್ರ ರಾಜಧಾನಿ ವಿಕೇಂದ್ರೀಕರಣ ಬೆಂಬಲಿಸಿ ವೈಎಸ್ಆರ್ ಪಿಯಿಂದ ಬೃಹತ್‍ ಮೆರವಣಿಗೆ

ವಿಜಯವಾಡ: ಆಂಧ್ರ ರಾಜಧಾನಿ ವಿಕೇಂದ್ರೀಕರಣದ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಬೆಂಬಲಿಸಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‍ ಪಿ) ಭಾನುವಾರ ಇಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. 

ಧಾರ್ಮಿಕ ದತ್ತಿ  ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ರಾವ್ ನೇತೃತ್ವದ ಮೆರವಣಿಗೆಯು ಬಿಆರ್‌ಟಿಎಸ್ ರಸ್ತೆಯ  ಸೀತನ್ನಪೇಟದಲ್ಲಿ ಆರಂಭವಾಗಿ ಮಧುರಾ ನಗರದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ  ಹೆಚ್ಚಿನ ಸಂಖ್ಯೆಯ ಜನರು ಫಲಕಗಳು ಮತ್ತು ಫ್ಲೆಕ್ಸಿ ಬ್ಯಾನರ್‌ಗಳನ್ನು ಹಿಡಿದಿದ್ದರು.  ವೈಎಸ್‌ಆರ್‌ಸಿಪಿ ಶಾಸಕರಾದ ಮಲ್ಲಾಡಿ ವಿಷ್ಣು, ಜೋಗಿ ರಮೇಶ್, ಕೊಲುಸು ಪಾರ್ಥಸಾರಥಿ  ಸೇರಿದಂತೆ ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ರಾವ್, ರಾಜ್ಯದ ಜನರು ರಾಜಧಾನಿ ವಿಕೇಂದ್ರೀಕರಣದ ಪರವಾಗಿದ್ದಾರೆ. ಇಂದಿನ  ಬೃಹತ್‍ ಜನಸಂದಣಿಯು ಜನರ ಮನಸ್ಥಿತಿಯನ್ನು  ಪ್ರತಿಬಿಂಬಿಸುತ್ತದೆ. ರಾಜಧಾನಿಯನ್ನು ವಿಕೇಂದ್ರೀಕರಿಸುವ ಮಸೂದೆಯನ್ನು ಸೋಮವಾರ  ವಿಧಾನಸಭೆಯಲ್ಲಿ ಮಂಡಿಸಲಾಗುವುದು ಮತ್ತು ಅಂಗೀಕರಿಸಲಾಗುವುದು ಎಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com