ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ: ಪ್ರಧಾನಿ ಮೋದಿ

ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಪಿ.ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ನಡ್ಡಾ ತಮಗೆ ದೊರಕಿರುವ ಯಾವುದೇ ಜವಾಬ್ದಾರಿಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ-ಜೆಪಿ ನಡ್ಡಾ
ನರೇಂದ್ರ ಮೋದಿ-ಜೆಪಿ ನಡ್ಡಾ

ನವದೆಹಲಿ: ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಪಿ.ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ನಡ್ಡಾ ತಮಗೆ ದೊರಕಿರುವ ಯಾವುದೇ ಜವಾಬ್ದಾರಿಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಯುವ ಬಿಜೆಪಿ ಕಾರ್ಯಕರ್ತ, ಶಾಸಕ, ಹಿಮಾಚಲ ಪ್ರದೇಶದ ಸಚಿವರು, ಇಲ್ಲವೇ ಕೇಂದ್ರದ ಸಂಘಟನಾ ಕರ್ತವ್ಯ, ಸಂಸದ ಮತ್ತು ಕೇಂದ್ರ ಸಚಿವರ ಹುದ್ದೆಗಳನ್ನು ನಡ್ಡಾ ನಿಷ್ಠೆಯಿಂದ ನಿಭಾಯಿಸಿದ್ದಾರೆ ಎಂದು ಮೋದಿ ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಹಿಂದಿನ ಅಧ್ಯಕ್ಷ ಅಮಿತ್ ಶಾ ಅವರನ್ನು ಕೂಡ ಶ್ಲಾಘಿಸಿರುವ ಮೋದಿ, ಶಾ ಅವರು ನೀಡಿರುವ ಕೊಡುಗೆಯನ್ನು ವರ್ಣಿಸಲು ಪದಗಳಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com