'ಚಂದ್ರಯಾನ-2 ವೈಫಲ್ಯ ನಮಗೆ ಪ್ರೇರಣೆಯನ್ನು ಕಲಿಸಿದೆ': ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪಾಠ ಮಾಡಿದ್ದಾರೆ. ದೆಹಲಿಯ ಟಲ್ಕಟೊರ ಒಳಾಂಗಣ ಕ್ರೀಡಾಂಗಣದಲ್ಲಿ ಪರೀಕ್ಷಾ ಪೆ ಚರ್ಚಾ-2020 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಸಂದೇಹಗಳಿಗೆ ಉತ್ತರ ಕೊಟ್ಟಿದ್ದಾರೆ.
'ಚಂದ್ರಯಾನ-2 ವೈಫಲ್ಯ ನಮಗೆ ಪ್ರೇರಣೆಯನ್ನು ಕಲಿಸಿದೆ': ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ನವದೆಹಲಿ: ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪಾಠ ಮಾಡಿದ್ದಾರೆ. ದೆಹಲಿಯ ಟಲ್ಕಟೊರ ಒಳಾಂಗಣ ಕ್ರೀಡಾಂಗಣದಲ್ಲಿ ಪರೀಕ್ಷಾ ಪೆ ಚರ್ಚಾ-2020 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಸಂದೇಹಗಳಿಗೆ ಉತ್ತರ ಕೊಟ್ಟಿದ್ದಾರೆ, ಜೀವನ ಮತ್ತು ವಿದ್ಯಾರ್ಥಿ ಜೀವನದಲ್ಲಿ ಹೇಗಿರಬೇಕು, ಬೋರ್ಡಿಂಗ್ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಹೇಗೆ ಅಧ್ಯಯನ ಮಾಡಬೇಕು ಇತ್ಯಾದಿ ವಿಷಯಗಳ ವಿದ್ಯಾರ್ಥಿಗಳೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಶಿಕ್ಷಕರು ಮತ್ತು ಪೋಷಕರು ಕೂಡ ಭಾಗವಹಿಸಿದ್ದಾರೆ. 


ಅವರ ಮಾತುಗಳ ಮುಖ್ಯಾಂಶಗಳು ಹೀಗಿವೆ: ಕಳೆದ ವರ್ಷ ದೇಶದ ಬಹು ನಿರೀಕ್ಷಿತ ಇಸ್ರೊ ಕೇಂದ್ರ ಉಡಾಯಿಸಿದ ಚಂದ್ರಯಾನ-2 ವಿಫಲವಾಯಿತು. ಉಡಾವಣೆ ಕಾರ್ಯಕ್ರಮದಲ್ಲಿ ನಾನು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿದ್ದೆ. ಕೆಲವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದರು. ಉಡಾವಣೆ ಯಶಸ್ವಿಯಾಗುತ್ತದೆ ಎಂದು ವಿಶ್ವಾಸವಿರಲಿಲ್ಲ, ಒಂದು ವೇಳೆ ವಿಫಲವಾದರೆ ಏನು ಮಾಡುವುದು ಎಂದು. ಅದಕ್ಕಾಗಿಯೇ ನಾನು ಅಲ್ಲಿರಬೇಕು ಎಂದು ಹಾಗೆ ಹೇಳಿದವರಿಗೆ ಹೇಳಿದ್ದೆ.


ಚಂದ್ರಯಾನ-2 ವಿಫಲವಾಗುವ ಸಂದರ್ಭದಲ್ಲಿ ವಿಜ್ಞಾನಿಗಳ ಮುಖದಲ್ಲಿ ಮಹತ್ತರ ಬದಲಾವಣೆ ಗಮನಿಸಿದೆ. ನಂತರ ಅವರು ನನ್ನ ಬಳಿ ಬಂದು ವಿಫಲವಾಯಿತು ಎಂದು ಹೇಳಿದರು. ಆಗ ಬೇಸರಪಟ್ಟುಕೊಳ್ಳಬೇಡಿ ಎಂದು ಸಮಾಧಾನ ಹೇಳಿ ಅಲ್ಲಿಂದ ಬಂದೆ ಎಂದರು.

ಆದರೆ ನನಗೆ ಸಮಾಧಾನವಾಗಲಿಲ್ಲ. ಪ್ರಧಾನಮಂತ್ರಿ ಕಾರ್ಯಾಲಯದ ತಂಡದವರನ್ನು ಕರೆದು ನನ್ನ ಸಮಯವನ್ನು ಬದಲಾಯಿಸಿ ಮರುದಿನ ಬೆಳಗ್ಗೆ ವಿಜ್ಞಾನಿಗಳನ್ನು ಭೇಟಿ ಮಾಡಿದೆ. ನನ್ನ ಭಾವನೆಗಳನ್ನು ಅವರ ಜೊತೆ ಹಂಚಿಕೊಂಡು ಅವರ ಪ್ರಯತ್ನವನ್ನು ಶ್ಲಾಘಿಸಿದೆ. ವೈಫಲ್ಯದಲ್ಲಿ ಯಶಸ್ಸಿನ ಶಿಕ್ಷಣ ನಮಗೆ ಸಿಗಬೇಕು. 

ಪ್ರಧಾನಿ ಮೋದಿ ಚಂದ್ರಯಾನ-2 ಉದಾಹರಣೆಯನ್ನು ವಿದ್ಯಾರ್ಥಿಗಳು ಕಲಿಕೆ ಮತ್ತು ಇತರ ಚಟುವಟಿಕೆಗಳಲ್ಲಿ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ವಿಷಯಕ್ಕೆ ಉದಾಹರಣೆಯಾಗಿ ನೀಡಿದರು.

ಯಾವತ್ತಿಗೂ ವಿಶ್ವಾಸ, ಉತ್ಸಾಹ ಕಳೆದುಕೊಳ್ಳಬಾರದು, ನಮಗೆ ಬೇರೆಯವರಿಂದ ಅತಿಯಾದ ನಿರೀಕ್ಷೆಯಿದ್ದಾಗ ಈ ಸಮಸ್ಯೆ ಉದ್ಭವವಾಗುತ್ತದೆ. ನಾವು ಅಂದುಕೊಂಡ ಕೆಲಸ ಈಡೇರದಿದ್ದಾಗ ನಿರಾಶೆಯಾಗುತ್ತದೆ. ವಿದ್ಯಾರ್ಥಿಗಳು ಬೇರೆಯವರ ಸ್ಥಾನದಲ್ಲಿ ನಿಂತು ಅವರ ನಿರೀಕ್ಷೆಗಳು ಏಕೆ ಯೋಚಿಸಬೇಕು ಎಂದು ಕೇಳಬೇಕು. ವೈಫಲ್ಯದಿಂದ ಉತ್ಸಾಹ ಕಳೆದುಕೊಳ್ಳದವರು ಜೀವನದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ.

ತಾತ್ಕಾಲಿಕ ವೈಫಲ್ಯಗಳ ಬಗ್ಗೆ ಚಿಂತಿಸದಿರಿ: ತಾತ್ಕಾಲಿಕ ವೈಫಲ್ಯಗಳಿಂದ ಖಿನ್ನರಾಗಿ ಯಶಸ್ಸು ಸಿಗುವುದೇ ಇಲ್ಲ ಎಂಬ ನಿರಾಶೆ, ಹತಾಶೆ  ಭಾವನೆ ಬೇಡ  ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಯಾವುದೇ ಹಿನ್ನಡೆಯಿಂದ ನಿರಾಶರಾಗಬೇಡಿ, ಭರವಸೆ ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ನಾವು ಜೀವನದ ಪ್ರತಿಯೊಂದು ಅಂಶಕ್ಕೂ ಉತ್ಸಾಹ ಸೇರಿಸಬಹುದು. ತಾತ್ಕಾಲಿಕ ಹಿನ್ನಡೆ ಎಂದರೆ ಯಶಸ್ಸು ಸಿಗುವುದೇ ಇಲ್ಲ,  ಕಾಯುತ್ತಿಲ್ಲ ಎಂದಲ್ಲ. ವಾಸ್ತವವಾಗಿ, ಒಂದು ಹಿನ್ನಡೆ ಎಂದರೆ ಇನ್ನೂ ಉತ್ತಮವಾದದ್ದು ಬರಬೇಕಿದೆ, ಬರಲಿದೆ  ಎಂದೂ ತಿಳಿಯಿರಿ, ಅರಿಯಿರಿ  ಎಂದು ಪರೀಕ್ಷಾ  ಪೇ  ಚಾರ್ಚಾ 2020' ಭಾಷಣದಲ್ಲಿ ಮೋದಿ ಒತ್ತಿ ಹೇಳಿದರು. 


ಅವರು ಕ್ರಿಕೆಟ್ ಪಂದ್ಯಗಳ ಚಿತ್ರಣ  ನೀಡಿ, 2001 ರಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಿಮಗೆ ನೆನಪಿದೆಯೇ? ನಮ್ಮ ಕ್ರಿಕೆಟ್ ತಂಡವು ಹಿನ್ನಡೆ ಎದುರಿಸಿತು. ಮನಸ್ಥಿತಿ ಚೆನ್ನಾಗಿರಲಿಲ್ಲ  ಆ ಕ್ಷಣಗಳಲ್ಲಿ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಮಾಡಿದ್ದನ್ನು ನಾವು ಎಂದಾದರೂ ಮರೆಯಬಹುದೇ. ಅವರು ಪಂದ್ಯವನ್ನು ತಿರುಗಿಸಿದರು ಎಂದೂ ಪ್ರಧಾನಿ ಹೇಳಿದರು 
ಇನ್ನೊಂದು ಸಂದರ್ಭದಲ್ಲಿ  ಅನಿಲ್ ಕುಂಬ್ಳೆ ಆ ಪಂದ್ಯದ ವೇಳೆ ಗಾಯಗೊಂಡಿದ್ದರು. ಆದಾಗ್ಯೂ, ಅವರು ಆಟವಾಡಿ,  ಪಂದ್ಯವನ್ನು ಗೆಲುವಿನ ದಡ ಮುಟ್ಟಿಸಿದರು ಎಂದು ಮೆಲಕು ಹಾಕಿದರು. ಇದು ಪ್ರೇರಣೆ ಮತ್ತು ಸಕಾರಾತ್ಮಕ ಚಿಂತನೆಯ ಶಕ್ತಿ ಎಂದು ಅವರು ಹೇಳಿದರು.

ಚಂದ್ರಯಾನ 2ರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಚಂದ್ರಯಾನ2ರ ಸೋಲಿನಿಂದ ನಾನೂ ಕಂಗೆಟ್ಟಿದ್ದೆ. ಆದರೆ, ನಾನು ವಿಜ್ಞಾನಿಗಳ  ಬಳಿ ಹೋದಾಗ ಅವರನ್ನು ಹುರಿದುಂಬಿಸಿದೆ. ನಮ್ಮ ವೈಫಲ್ಯ, ಸೋಲುಗಳಿಂದ ಪಾಠವನ್ನು ಕಲಿತುಕೊಂಡು ಯಶಸ್ಸಿನೆಡೆಗೆ ಸಾಗಬೇಕು. ಸೋಲುಗಳು ನಮ್ಮ ಬದುಕಿನ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು ಎಂದರು.  
ತಪ್ಪುಗಳು ಸಂಭವಿಸಬಹುದು ಆದರೆ ಅದು ಹೊಸ ಮೈಲಿಗಲ್ಲುಗಳನ್ನು ಸಾಧಿಸುವುದನ್ನು ತಡೆಯಬಾರದು ಎಂದು ಅವರು ಹೇಳಿದರು. ನಾವು ತಪ್ಪುಗಳನ್ನು ಸಹ ಮಾಡಬಹುದು, ನನ್ನ ವಿಷಯದಲ್ಲಿ, ನಾನು ತಪ್ಪು ಮಾಡಿದರೆ ಮಾಧ್ಯಮದ  ಸ್ನೇಹಿತರೂ ಅದನ್ನು ಪ್ರೀತಿಸುತ್ತಾರೆ  ಎಂದರು. 


ಪ್ರಧಾನ ಮಂತ್ರಿಯಾಗಿ ಹಲವಾರು ರೀತಿಯ ಕಾರ್ಯಕ್ರಮಗಳಿಗೆ ಹಾಜರಾಗುತ್ತೇನೆ  ಅವುಗಳಲ್ಲಿ ಪ್ರತಿಯೊಂದೂ ಹೊಸ ಅನುಭವ ನೀಡುತ್ತಿದೆ  ಆದರೆ, ನಿಮ್ಮ ಹೃದಯವನ್ನು ಹೆಚ್ಚು ಸ್ಪರ್ಶಿಸುವ ಒಂದು ಕಾರ್ಯಕ್ರಮ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಇದನ್ನೇ  ಹೇಳುವೆ ಇದು ನನ್ನ ಹೃದಯಕ್ಕೆ ತಟ್ಟಿದ, ಮುಟ್ಟಿದ ಅಚ್ಚುಮೆಚ್ಚಿನ  ಕಾರ್ಯಕ್ರಮ ಎಂದು ಹೇಳಿದರು.
ಭಾರತದ ಯುವಕರ ಶಕ್ತಿ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ಕಾರಣ ಅವರು ಹ್ಯಾಕಥಾನ್‌ಗಳಿಗೆ ಹಾಜರಾಗುವುದನ್ನು ಇಷ್ಟಪಡುತ್ತಾರೆ ಎಂದು ಅವರು ಹೇಳಿದರು.


ಈ ದಶಕದಲ್ಲಿ ದೇಶವು ಏನೇ ಮಾಡಿದರೂ, ಈ ವರ್ಷ 10 ನೇ ಮತ್ತು 12 ವಿದ್ಯಾರ್ಥಿಗಳು ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ  ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com