'ಮಕ್ಕಳ ಮೇಲೆ ಒತ್ತಡ ಹೇರಬೇಡಿ, ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ':ಪಿಎಂ ಮೋದಿ ಕಿವಿಮಾತು!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಪರೀಕ್ಷಾ ಪೆ ಚರ್ಚಾ-2020 ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
'ಮಕ್ಕಳ ಮೇಲೆ ಒತ್ತಡ ಹೇರಬೇಡಿ, ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ':ಪಿಎಂ ಮೋದಿ ಕಿವಿಮಾತು!

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಪರೀಕ್ಷಾ ಪೆ ಚರ್ಚಾ-2020 ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.


ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಅದರಲ್ಲೂ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳೆಂದರೆ ಮಕ್ಕಳಿಗೆ ಮಾತ್ರವಲ್ಲದೆ ಅವರ ಪೋಷಕರಿಗೆ ಸಹ ಆತಂಕವಿರುತ್ತದೆ. ಹಾಗೆಂದು ಮಕ್ಕಳ ಮೇಲೆ ಪೋಷಕರು ಪರೀಕ್ಷೆ, ಪ್ರವೇಶ ಪರೀಕ್ಷೆ ಎಂದು ಯಾವಾಗಲೂ ಒತ್ತಡ ಹಾಕುತ್ತಿರಬಾರದು. ಇಂದು ಪ್ರಪಂಚ ವಿಶಾಲವಾಗಿದೆ, ಮಕ್ಕಳಿಗೆ ಸಾಕಷ್ಟು ಅವಕಾಶಗಳು ಕೂಡ ತೆರೆದಿರುತ್ತವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಪರೀಕ್ಷೆಗಳಿಗೆ ಮಾತ್ರ ನಿರ್ಬಂಧ ಹಾಕಬಾರದು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳ ಆಸಕ್ತಿ ಪೋಷಕರಿಗೆ ಫ್ಯಾಶನ್ ಆಗಬಾರದು. ಪಠ್ಯೇತರ ಚಟುವಟಿಕೆಗಳಿಗೆ ತಮ್ಮ ಮಕ್ಕಳನ್ನು ಪೋಷಕರು ಫ್ಯಾಶನ್ ಗಾಗಿ ಕಳುಹಿಸಬಾರದು. ಪೋಷಕರ ಆಸೆ, ಒತ್ತಾಸೆಗಳನ್ನು ಮಕ್ಕಳ ಮೇಲೆ ಹೇರುವುದು ಕೂಡ ಸರಿಯಲ್ಲ, ಮಕ್ಕಳಿಗೆ ಏನು ಇಷ್ಟವೊ ಅದನ್ನು ಕಲಿಯಲಿ ಎಂದರು.


ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಬೇಕು, ಇಲ್ಲದಿದ್ದರೆ ಅವರ ಬದುಕು ರೋಬೋಟ್ ತರಹ ಆಗುತ್ತದೆ.ಮುಂದಿನ ಯುವ ಜನಾಂಗ ರೋಬೋಟ್ ಗಳ ತರಹ ಆಗಬೇಕೆ, ಅವರಲ್ಲಿ ಸಾಕಷ್ಟು ಶಕ್ತಿ ಮತ್ತು ಕನಸುಗಳಿರುತ್ತವೆ, ಅದನ್ನು ಸಾಕಾರಗೊಳಿಸಲು ಪೋಷಕರು ಪ್ರಯತ್ನಿಸಬೇಕು, ಸಮಯ ನಿರ್ವಹಣೆಗೆ ಮಹತ್ವ ನೀಡಬೇಕು.

ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಪ್ರಧಾನಿ ಹೇಳಿದ್ದೇನು?: ಇಂದು ತಂತ್ರಜ್ಞಾನ ಸಾಕಷ್ಟು ಬೆಳೆದಿದೆ, ಅವುಗಳನ್ನು ಇಂದಿನ ಜನಾಂಗ ಮತ್ತು ಮುಂದಿನ ಯುವಜನತೆ ಸದ್ಭಳಕೆ ಮಾಡಿಕೊಳ್ಳಬೇಕು. ಹಾಗೆಂದು ಮಕ್ಕಳು ಇಡೀ ದಿನ ಅದರಲ್ಲಿಯೇ ಮುಳುಗಿರಬಾರದು,

ಸ್ಮಾರ್ಟ್ ಫೋನ್ ಗೆ ಬಳಸುವ ಸಮಯದಲ್ಲಿ ಶೇಕಡಾ 10ರಷ್ಟು ಸಮಯವನ್ನು ನಿಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಜೊತೆ ಕಳೆಯಿರಿ, 
ಒಂದು ಮನೆಯಲ್ಲಿ ನಾಲ್ಕು ಜನರು ಇರುತ್ತಾರೆ ಎಂದಿಟ್ಟುಕೊಳ್ಳಿ. ನಾಲ್ವರೂ ಊಟಕ್ಕೆ ಕುಳಿತುಕೊಳ್ಳುತ್ತಾರೆ, ಕೈಯಲ್ಲಿ ಮೊಬೈಲ್, ಅಥವಾ ಕಂಪ್ಯೂಟರ್, ಟಿವಿ ಮುಂದೆ ಕುಳಿತು ನೋಡುತ್ತಿರುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲಿ, ಮನೆಯ ಒಂದು ಕೋಣೆ ತಂತ್ರಜ್ಞಾನದಿಂದ ಮುಕ್ತವಾಗಿರಬೇಕು, ಒಂದಷ್ಟು ಹೊತ್ತು ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಿಂದ ದೂರವುಳಿದು ಮನೆಯ ಸದಸ್ಯರು ಪರಸ್ಪರ ಮಾತನಾಡುತ್ತಾ, ಚರ್ಚೆ ಮಾಡುತ್ತಾ, ನೋವು-ನಲಿವುಗಳನ್ನು ಹಂಚಿಕೊಳ್ಳಬೇಕು.
ಹಿಂದೆಲ್ಲಾ ಹಬ್ಬ ಹರಿದಿನಗಳಲ್ಲಿ ನಮ್ಮ ಬಂಧುಗಳು, ಸ್ನೇಹಿತರಿಗೆ ಮುಖತಃ ಭೇಟಿ ಮಾಡಿ ಶುಭಾಶಯ ಹೇಳುತ್ತಿದ್ದೆವು. ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com