ಸಿಎಎ ವಿಚಾರದಲ್ಲಿ ಬಿಜೆಪಿಯೊಡನೆ ಭಿನ್ನಮತ: ದೆಹಲಿ ಚುನಾವಣಾ ಕಣದಿಂದ ಹಿಂದೆ ಸರಿದ ಅಕಾಲಿ ದಳ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಬಗ್ಗೆ ತನ್ನ ನಿಲುವನ್ನು ಬದಲಾಯಿಸುವಂತೆ ತನ್ನ ಮಿತ್ರಪಕ್ಷ ಭಾರತೀಯ ಜನತಾ ಪಕ್ಷ ಕೇಳಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳುನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಶಿರೋಮಣಿ ಅಕಾಲಿ ದಳ ಸೋಮವಾರ ಹೇಳಿದೆ.
Published: 20th January 2020 09:39 PM | Last Updated: 20th January 2020 09:39 PM | A+A A-

ಸಿಎಎ ವಿಚಾರದಲ್ಲಿ ಬಿಜೆಪಿಯೊಡನೆ ಭಿನ್ನಮತ: ದೆಹಲಿ ಚುನಾವಣಾ ಕಣದಿಂದ ಹಿಂದೆ ಸರಿದ ಅಕಾಲಿ ದಳ
ಚಂಡೀಘರ್: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಬಗ್ಗೆ ತನ್ನ ನಿಲುವನ್ನು ಬದಲಾಯಿಸುವಂತೆ ತನ್ನ ಮಿತ್ರಪಕ್ಷ ಭಾರತೀಯ ಜನತಾ ಪಕ್ಷ ಕೇಳಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳುನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಶಿರೋಮಣಿ ಅಕಾಲಿ ದಳ ಸೋಮವಾರ ಹೇಳಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಡಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಬಿಜೆಪಿಯೊಂದಿಗಿನ ಮೂರು ಚುನಾವಣೆ ಸಂಬಂಧಿತ ಸಭೆಗಳಲ್ಲಿ, ಸಿಎಎ ಬಗ್ಗೆ ತನ್ನ ನಿಲುವನ್ನು ಪರಿಗಣಿಸಲು ತಮ್ಮ ಪಕ್ಷವನ್ನು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು
"ಬಿಜೆಪಿಯೊಂದಿಗಿನ ನಮ್ಮ ಸಭೆಯಲ್ಲಿ, ಸಿಎಎ ಬಗ್ಗೆ ನಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಕೇಳಲಾಯಿತು ಆದರೆ ನಾವು ಅದನ್ನು ನಿರಾಕರಿಸಿದ್ದೇವೆಮುಸ್ಲಿಮರನ್ನು ಸಿಎಎಯಿಂದ ಹೊರಗುಳಿಯಲು ಸಾಧ್ಯವಿಲ್ಲ ಎಂಬ ದೃಢ ಲುವನ್ನು ಶಿರೋಮಣಿ ಅಕಾಲಿ ದಳ ಹೊಂದಿದೆ.
"ನಾವು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧವೂ ಬಲವಾದ ಪ್ರತಿರೋಧ ಹೊಂದಿದ್ದೇವೆ." ಎಂದು ರಾಜೌರಿ ಗಾರ್ಡನ್ ಕ್ಷೇತ್ರದಿಂದ ದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ ಸಿರ್ಸಾ ಹೇಳಿದ್ದಾರೆ.