ಉತ್ತರಾಖಂಡ್: ರೈಲು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಉರ್ದು ಬದಲು ಇನ್ನು ಮುಂದೆ  ಸಂಸ್ಕೃತ! 

ಉತ್ತರಾಖಂಡ್ ನ ರೈಲು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳಲ್ಲಿ ಉರ್ದು ಭಾಷೆಯ ಬದಲು ಸಂಸ್ಕೃತ ಭಾಷೆಯನ್ನು ಬಳಕೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. 
ಉತ್ತರಾಖಂಡ್: ರೈಲು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಉರ್ದು ಬದಲು ಇನ್ನು ಮುಂದೆ  ಸಂಸ್ಕೃತ!
ಉತ್ತರಾಖಂಡ್: ರೈಲು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಉರ್ದು ಬದಲು ಇನ್ನು ಮುಂದೆ  ಸಂಸ್ಕೃತ!

ಡೆಹ್ರಾಡೂನ್: ಉತ್ತರಾಖಂಡ್ ನ ರೈಲು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳಲ್ಲಿ ಉರ್ದು ಭಾಷೆಯ ಬದಲು ಸಂಸ್ಕೃತ ಭಾಷೆಯನ್ನು ಬಳಕೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. 

ಉತ್ತರಾಖಂಡ್ ನ ಎರಡನೇ ಭಾಷೆ ಸಂಸ್ಕೃತವಾಗಿದ್ದು, ನಿಯಮಗಳ ಪ್ರಕಾರ ಬದಲಾವಣೆ ತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಹಿಂದಿ, ಇಂಗ್ಲೀಷ್, ಉರ್ದು ಗಳ ಬದಲಾಗಿ ರೈಲ್ವೆ ನಿಲ್ದಾಣಗಳ ಹೆಸರುಗಳನ್ನು, ಪ್ಲಾಟ್ ಫಾರ್ಮ್ ನ ಸೂಚನಾ ಫಲಕಗಳು ರಾಜ್ಯಾದ್ಯಂತ ಈಗ ಹಿಂದಿ, ಇಂಗ್ಲೀಷ್ ಸಂಸ್ಕೃತಗಳಲ್ಲಿ ಇರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2010 ಕ್ಕಿಂತ ಮೊದಲು ಉರ್ದು ಭಾಷೆ ಉತ್ತರಾಖಂಡ್ ನ ಎರಡನೇ ಅಧಿಕೃತ ಭಾಷೆಯಾಗಿತ್ತು. ನಂತರ ಸಂಸ್ಕೃತವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com