ಮೂರು ರಾಜಧಾನಿಯನ್ನು ರಚಿಸುವ ಮಸೂದೆ ಆಂಧ್ರ ವಿಧಾನಸಭೆಯಲ್ಲಿ ಅಂಗೀಕಾರ

 ಆಂಧ್ರಪ್ರದೇಶದ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ 2020 ನ್ನು ಆಂಧ್ರಪ್ರದೇಶ  ವಿಧಾನಸಭೆಯು ಸೋಮವಾರ ತಡರಾತ್ರಿ ಅಂಗೀಕರಿಸಿತು, ಇದು ಮೂರು ರಾಜಧಾನಿಗಳನ್ನು ಹೊಂದುವ  ರಾಜ್ಯ ಸರ್ಕಾರದ ಯೋಜನೆಗೆ ಆಕಾರ ನೀಡುವ ಉದ್ದೇಶವನ್ನು ಹೊಂದಿದೆ ವಿಶಾಖಪಟ್ಟಣಂನಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಮತ್ತು ಕರ್ನೂಲ್ ನಲ್ಲಿ ನ್ಯಾಯಾಂಗಆಡಳಿತವಿರ
ವೈ.ಎಸ್.ಜಗನ್ ಮೋಹನ್ ರೆಡ್ಡಿ.
ವೈ.ಎಸ್.ಜಗನ್ ಮೋಹನ್ ರೆಡ್ಡಿ.

ಅಮರಾವತಿ: ಆಂಧ್ರಪ್ರದೇಶದ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ 2020 ನ್ನು ಆಂಧ್ರಪ್ರದೇಶ  ವಿಧಾನಸಭೆಯು ಸೋಮವಾರ ತಡರಾತ್ರಿ ಅಂಗೀಕರಿಸಿತು, ಇದು ಮೂರು ರಾಜಧಾನಿಗಳನ್ನು ಹೊಂದುವ  ರಾಜ್ಯ ಸರ್ಕಾರದ ಯೋಜನೆಗೆ ಆಕಾರ ನೀಡುವ ಉದ್ದೇಶವನ್ನು ಹೊಂದಿದೆ ವಿಶಾಖಪಟ್ಟಣಂನಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಮತ್ತು ಕರ್ನೂಲ್ ನಲ್ಲಿ ನ್ಯಾಯಾಂಗಆಡಳಿತವಿರಲಿದೆ.

ಆದರೆ ರಾಜ್ಯ ಸರ್ಕಾರದ ಈ ನೂತನ ನೀತಿಯನ್ನು ಖಂಡಿಸಿ  ಅಮರಾವತಿ ಪ್ರದೇಶದ ನೂರಾರು ರೈತರು ಮತ್ತು ಮಹಿಳೆಯರು ನಿಷೇಧವನ್ನು  ಧಿಕ್ಕರಿಸಿ, ರಾಜ್ಯ ಶಾಸಕಾಂಗ ಸಂಕೀರ್ಣವನ್ನು ಪ್ರವೇಶಿಸಲು ವಿಫಲ ಯತ್ನ ನಡೆಸಿದ್ದರು.ಈ ವೇಳೆ ಭದ್ರತೆ ನಿಯೋಜಿಸಿದ್ದ ಪೋಲೀಸರು ಗುಂ[ಇನ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.

ಸಂಕೀರ್ಣದ ಹಿಂಭಾಗದಲ್ಲಿ  ಈ ಘರ್ಷಣೆ ನಡೆಯುತ್ತಿದ್ದಾಗಲೇ  ಪ್ರತಿಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಟಿಡಿಪಿ ಶಾಸಕರನ್ನು ಮುಖ್ಯ ಪ್ರವೇಶ ದ್ವಾರದಿಂದ ಕೆಲವು ಮೀಟರ್  ವರೆಗಿದ್ದ ವಿಧಾನಸ್ಭೆಗೆ ಮೆರವಣಿಗೆಯಲ್ಲಿ ಮುನ್ನಡೆಸಿದರು. ಆದಾಗ್ಯೂಬಲವಾದ ಪೊಲೀಸ್ ಭದ್ರತೆಗಳಿದ್ದ ಕಾರಣ ಟಿಡಿಪಿಗೆ ಧಾನಸಭೆಯ ಮುತ್ತಿಗೆಯನ್ನು ನಡೆಸಲಾಗಲಿಲ್ಲ.

ಏತನ್ಮಧ್ಯೆ, 2020 ರಲ್ಲಿ ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣ ತೆಲುಗು ದೇಶಂ ಪಕ್ಷದ 17 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. 

ಮಸೂದೆಯು ರಾಜ್ಯವನ್ನು ವಿವಿಧ ವಲಯಗಳಾಗಿ ವಿಂಗಡಿಸಲು ಮತ್ತು ವಲಯ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ.ಮಸೂದೆಯು ರಾಜ್ಯವನ್ನು ವಿವಿಧ ವಲಯಗಳಾಗಿ ವಿಂಗಡಿಸಲು ಮತ್ತು ವಲಯ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಚಳಿಗಾಲದ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಹಣಕಾಸು ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನಾ ರಾಜೇಂದ್ರನಾಥ್, "ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು" ಖಚಿತಪಡಿಸಿಕೊಳ್ಳಲು ರಾಜ್ಯದ ಎಲ್ಲಾ ಪ್ರದೇಶಗಳ ವಿಕೇಂದ್ರೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಹೊಸ ಶಾಸನ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com