ನನನ್ನು ಸೋಲಿಸುವುದು ಪ್ರತಿಪಕ್ಷಗಳ ಗುರಿ, ಭ್ರಷ್ಟಾಚಾರ ಮಟ್ಟ ಹಾಕುವುದೇ  ನನ್ನ ಧ್ಯೇಯ- ಕೇಜ್ರಿವಾಲ್ 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನನ್ನು ಸೋಲಿಸುವುದು ಪ್ರತಿಪಕ್ಷಗಳ ಗುರಿಯಾದರೆ, ಭ್ರಷ್ಟಾಚಾರವನ್ನು ಮಟ್ಟ ಹಾಕಿ ರಾಷ್ಟ್ರ ರಾಜಧಾನಿಯನ್ನು ಪ್ರಗತಿಪಥದತ್ತ ಕೊಂಡೊಯ್ಯುವುದೇ ನನ್ನ ಧ್ಯೇಯೆಯಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನನ್ನು ಸೋಲಿಸುವುದು ಪ್ರತಿಪಕ್ಷಗಳ ಗುರಿಯಾದರೆ, ಭ್ರಷ್ಟಾಚಾರವನ್ನು ಮಟ್ಟ ಹಾಕಿ ರಾಷ್ಟ್ರ ರಾಜಧಾನಿಯನ್ನು ಪ್ರಗತಿಪಥದತ್ತ ಕೊಂಡೊಯ್ಯುವುದೇ ನನ್ನ ಧ್ಯೇಯೆಯಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಒಂದು ಕಡೆ ಬಿಜೆಪಿ, ಜೆಡಿಯು, ಎಲ್ ಜೆಪಿ, ಜೆಜೆಪಿ , ಕಾಂಗ್ರೆಸ್ , ಆರ್ ಜೆಡಿ ಇದ್ದರೆ ಮತ್ತೊಂದೆಡೆ ಶಾಲೆ, ಆಸ್ಪತ್ರೆ, ನೀರು, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಸೇವೆಗಳಿವೆ. ಭ್ರಷ್ಟಾಚಾರವನ್ನು ಮಟ್ಟ ಹಾಕುವುದೇ ನನ್ನ ಗುರಿ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮೈತ್ರಿ ಪಕ್ಷಗಳಾದ ಜೆಡಿಯು, ಎಲ್ ಜೆಪಿ ಜೊತೆಗೆ ಹೋರಾಡುತ್ತಿದ್ದರೆ ಕಾಂಗ್ರೆಸ್ ಆರ್ ಜೆಡಿ ಮೈತ್ರಿಯೊಂದಿಗೆ ಚುನಾವಣಾ ಕಣದಲ್ಲಿವೆ. ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com