ದಾಳಿ ಎದುರಿಸಲು ಸಿದ್ಧರಾಗಿ: ಐಎಂಎಫ್ ಕುರಿತು ಚಿದಂಬರಂ ಹೀಗೆ ಯಾಕೆ ಹೇಳಿದ್ದು ಅಂದ್ರೆ...

ಐಎಂಎಫ್ ಪ್ರಸಕ್ತ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ಇಳಿಸಿರುವ ಬಗ್ಗೆ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ. 
ದಾಳಿ ಎದುರಿಸಲು ಸಿದ್ಧರಾಗಿ: ಐಎಂಎಫ್ ಕುರಿತು ಚಿದಂಬರಂ ಹೀಗೆ ಯಾಕೆ ಹೇಳಿದ್ದು ಅಂದ್ರೆ...
ದಾಳಿ ಎದುರಿಸಲು ಸಿದ್ಧರಾಗಿ: ಐಎಂಎಫ್ ಕುರಿತು ಚಿದಂಬರಂ ಹೀಗೆ ಯಾಕೆ ಹೇಳಿದ್ದು ಅಂದ್ರೆ...

ನವದೆಹಲಿ: ಐಎಂಎಫ್ ಪ್ರಸಕ್ತ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ಇಳಿಸಿರುವ ಬಗ್ಗೆ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ. 

ಅಂತರರಾಷ್ಟ್ರೀಯ ಹಣಕಾಸು ನಿಧಿ ಆರ್ಥಿಕ ಬೆಳವಣಿಗೆ ಅಂದಾಜನ್ನು ಇಳಿಕೆ ಮಾಡಿರುವ ಪರಿಣಾಮ ಜಾಗತಿಕ ಸಂಸ್ಥೆ ಹಾಗೂ ಅದರ ಮುಖ್ಯಸ್ಥರಾದ ಗೀತಾ ಗೋಪಿನಾಥ್ ವಿರುದ್ಧ ಸರ್ಕಾರದ ಸಚಿವರ ವಾಗ್ದಾಳಿಗಳು, ಆಕ್ಷೇಪಗಳು ಸನ್ನಿಹಿತವಾಗಲಿದೆ ಎಂದು ಚಿದಂಬರಂ ಹೇಳಿದ್ದಾರೆ. 

ಐಎಂಎಫ್ ಶೇ. 4.8 ರಷ್ಟು ಬೆಳವಣಿಗೆ ಇರಲಿದೆ ಎಂದು ಹೇಳಿದೆ. ಆದರೆ ಅದಕ್ಕಿಂತಲೂ ಕಡಿಮೆ ಬೆಳವಣಿಗೆ ದಾಖಲಾದರೂ ಅಚ್ಚರಿಯೇನಿಲ್ಲ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. 

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ನೋಟು ಅಮಾನ್ಯೀಕರಣ ಕ್ರಮವನ್ನು ಮೊದಲು ಖಂಡಿಸಿದ್ದೇ ಐಎಂಎಫ್ ನ ಇಂದಿನ ಚೀಫ್ ಎಕಾನಮಿಸ್ಟ್ ಆಗಿರುವ ಗೀತಾ ಗೋಪಿನಾಥ್, ಆದ್ದರಿಂದ ಈಗ ಸರ್ಕಾರದ ಸಚಿವರು ಐಎಂಎಫ್ ಹಾಗೂ ಡಾ.ಗೀತಾ ಗೋಪಿನಾಥ್ ಅವರ ವಿರುದ್ಧದ ವಾಗ್ದಾಳಿ ಹಾಗೂ ಆಕ್ಷೇಪಗಳಿಗೆ ನಾವು ಸಜ್ಜಾಗಬೇಕಿದೆ ಎಂದು ಚಿದಂಬರಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com