ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ- ರಜನಿ ಕಾಂತ್ 

ಸಮಾಜ ಸುಧಾರಕ ಪರಿಯಾರ್ ಇವಿ ರಾಮಸ್ವಾಮಿ ಕುರಿತ ಹೇಳಿಕೆಗೆ ವಿಷಾಧ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಸ್ಪಷ್ಟಪಡಿಸಿದ್ದಾರೆ.

Published: 21st January 2020 12:00 PM  |   Last Updated: 21st January 2020 12:00 PM   |  A+A-


RajaniKanth1

ರಜನಿ ಕಾಂತ್

Posted By : Nagaraja AB
Source : PTI

ಚೆನ್ನೈ: ಸಮಾಜ ಸುಧಾರಕ ಪರಿಯಾರ್ ಇವಿ ರಾಮಸ್ವಾಮಿ ಕುರಿತ ಹೇಳಿಕೆಗೆ ವಿಷಾಧ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಸ್ಪಷ್ಟಪಡಿಸಿದ್ದಾರೆ.

ಪೆರಿಯಾರ್ ಕುರಿತ ಹೇಳಿಕೆಗೆ ರಜನಿಕಾಂತ್ ಕ್ಷಮೆಯಾಚಿಸಬೇಕೆಂದು ದ್ರಾವಿಡ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ,  ವಿವಾದಾತ್ಮಕ ರೀತಿಯ ಹೇಳಿಕೆಯನ್ನು ನಾನು ನೀಡಿಲ್ಲ.  ಮ್ಯಾಗಜಿನ್ ನಲ್ಲಿ ಏನು ಇತ್ತು ಮತ್ತು ನಾನು ಏನು ಕೇಳಿದ್ದೇನೂ ಅದನ್ನು ಮಾತ್ರ ಹೇಳಿದ್ದೇನೆ. ಇದರಲ್ಲಿ ಕ್ಷಮೆಯಾಚಿಸುವ ವಿಚಾರವೇ ಇಲ್ಲ ಎಂದು ಪೊಸ್ ಗಾರ್ಡನ್ ನಿವಾಸದ ಬಳಿ ಸುದ್ದಿಗಾರರಿಗೆ ತಿಳಿಸಿದರು.

ಜನವರಿ 14 ರಂದು ತುಘಲಕ್ ತಮಿಳು ಮ್ಯಾಗಜೀನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ರಜನಿಕಾಂತ್,  ಸೆಲಂನಲ್ಲಿ  1971ರಲ್ಲಿ ಪೆರಿಯಾರ್ ಇವಿ ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ರಾಮ ಮತ್ತು ಸೀತೆಯ ಬೆತ್ತಲೆ ಪೋಟೋಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲದೇ ಈ ಪೋಟೋಗಳಿಗೆ  ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು ಎಂದಿದ್ದರು.

ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸೂಪರ್ ಸ್ಟಾರ್ ಸುಳ್ಳು ಹೇಳಿಕೆ ನೀಡಿದ್ದು, ಕ್ಷಮೆಯಾಚಿಸಬೇಕೆಂದು ಡ್ರಾವಿಡ ಸಂಘಟನೆಯೊಂದು ಒತ್ತಾಯಿಸಿತ್ತು. ರಜನಿಕಾಂತ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp