'ರಾತ್ರಿ ಜೀವನ' ಪ್ರಸ್ತಾವನೆಗೆ ಠಾಕ್ರೆ ಸಂಪುಟ ಅಸ್ತು, ಜನವರಿ 27ರಿಂದ ಮುಂಬೈ 24X7 ಓಪನ್

ದೇಶದ ವಾಣಿಜ್ಯ ನಗರಿ ಮುಂಬೈನ 'ರಾತ್ರಿ ಜೀವನ'ಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಬುಧವಾರ ಅಸ್ತು ಎಂದಿದ್ದು,  ಇನ್ಮುಂದೆ  ಮಹಾನಗರಿಯ ಮಾಲ್​ಗಳು, ಉಪಾಹಾರ ರೆಸ್ಟೋರೆಂಟ್​ಗಳು, ಮಲ್ಟಿಫ್ಲೆಕ್ಸ್​​ಗಳು ಹಾಗೂ ಇತರೆ ಅಂಗಡಿಗಳು ದಿನದ 24 ಗಂಟೆ ತೆರೆದಿರುತ್ತವೆ.
ಮುಂಬೈ
ಮುಂಬೈ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ 'ರಾತ್ರಿ ಜೀವನ'ಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಬುಧವಾರ ಅಸ್ತು ಎಂದಿದ್ದು,  ಇನ್ಮುಂದೆ  ಮಹಾನಗರಿಯ ಮಾಲ್​ಗಳು, ಉಪಾಹಾರ ರೆಸ್ಟೋರೆಂಟ್​ಗಳು, ಮಲ್ಟಿಫ್ಲೆಕ್ಸ್​​ಗಳು ಹಾಗೂ ಇತರೆ ಅಂಗಡಿಗಳು ದಿನದ 24 ಗಂಟೆ ತೆರೆದಿರುತ್ತವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ  'ಮುಂಬೈ 24x7 ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಜನವರಿ 27ರಿಂದ ಮುಂಬೈ ನಗರದಲ್ಲಿ ಮಾಲ್​​ಗಳು, ರೆಸ್ಟೋರೆಂಟ್​ಗಳು, ಮಲ್ಟಿಫ್ಲೆಕ್ಸ್​​ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ದಿನದ 24 ಗಂಟೆ ತೆರೆದಿರುತ್ತವೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಮತ್ತು ಗೃಹ ಸಚಿವ ಅನಿಲ್ ದೇಶಮುಖ್ ಅವರು ಹೇಳಿದ್ದಾರೆ.

ಲಂಡನ್ ಹಾಗೂ ಮಧ್ಯಪ್ರದೇಶದ ಇಂದೋರ್ ನ ರಾತ್ರಿ ಜೀವನದ (ನೈಟ್ ಲೈಫ್) ಉದಾಹರಣೆಯನ್ನು ನೀಡಿದ ಆದಿತ್ಯ ಠಾಕ್ರೆ, "ಲಂಡನ್ ನ ನೈಟ್ ಲೈಫ್ ಆರ್ಥಿಕ ಚಟುವಟಿಕೆ ಮೌಲ್ಯವೇ ಐದು ಬಿಲಿಯನ್ ಪೌಂಡ್ ಇದೆ. ಸರ್ಕಾರದ ಈ ನಿರ್ಧಾರ ಆದಾಯ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ಸಹಕಾರಿಯಾಗಲಿದೆ. ಸೇವಾ ವಲಯದಲ್ಲಿ ಈಗಾಗಲೇ 5 ಲಕ್ಷ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದರು.

ಈ ರೀತಿ ದಿನದ  24 ಗಂಟೆಯೂ ಸವಲತ್ತು ಒದಗಿಸುವಲ್ಲಿ ಮುಂಬೈ ಹಿಂದುಳಿಯಬಾರದು. ನೈಟ್ ಲೈಫ್ ಅಂದರೆ ಮದ್ಯಪಾನ ಸೇವನೆ ಮಾತ್ರ ಅಂದುಕೊಳ್ಳುವುದು ತಪ್ಪು. ಆನ್ ಲೈನ್ ಶಾಪಿಂಗ್ 24 ಗಂಟೆಯೂ ತೆರೆದಿರುತ್ತದೆ ಅಂದರೆ ಮಳಿಗೆ ಮತ್ತು ಸಂಸ್ಥೆಗಳನ್ನು ಏಕೆ ರಾತ್ರಿ ವೇಳೆ ಮುಚ್ಚಬೇಕು? ಎಂದು ಪ್ರಶ್ನಿಸಿದ್ದಾರೆ.

"ರಾತ್ರಿ ವೇಳೆ ಮಳಿಗೆಗಳು, ಶಾಪಿಂಗ್​​​ ಮಾಲ್​ಗಳು, ಶಾಪ್​ಗಳು ಮತ್ತು ರೆಸ್ಟೋರೆಂಟ್​ಗಳು ಕಡ್ಡಾಯವಾಗಿ ತೆರೆದಿರಲೇಬೇಕು ಎಂದೇನಿಲ್ಲ. ಉತ್ತಮ ವ್ಯವಹಾರ ಮಾಡಬಹುದೆಂದು ಭಾವಿಸುವವರು ಮಾತ್ರ ತಮ್ಮ ಅಂಗಡಿ-ಶಾಪ್​ ಮತ್ತು ಮಾಲ್​ಗಳನ್ನು ಇಷ್ಟಪಟ್ಟು ತೆರೆಯಬಹುದಾಗಿದೆ," ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com