ಸಿಎಎ, ಎನ್ ಆರ್ ಸಿಯನ್ನು ಕಾಲಾನುಕ್ರಮವಾಗಿ ಜಾರಿಗೆ ತನ್ನಿ ನೋಡೋಣ: ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಸವಾಲ್ 

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಕೇಸುಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಪ್ರಯತ್ನಿಸಿ ಜಾರಿಗೊಳಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಯುಕ್ತ ಜನತಾ ದಳ ಉಪಾಧ್ಯಕ್ಷ ರಾಜಕೀಯ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದಾರೆ.


ನಾಗರಿಕೆ ತಿರಸ್ಕಾರ ಮತ್ತು ಭಿನ್ನಾಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ಯಾವುದೇ ಸರ್ಕಾರದ ಶಕ್ತಿಯೆನಿಸುವುದಿಲ್ಲ. ಸಿಎಎ, ಎನ್ ಆರ್ ಸಿ ವಿರುದ್ಧ ಪ್ರತಿಭಟನೆ ಮಾಡುವವರನ್ನು ನೀವು ಗಣನೆಗೆ ತೆಗೆದುಕೊಳ್ಳದಿದ್ದರೆ ಸಿಎಎ ಮತ್ತು ಎನ್ ಆರ್ ಸಿಯನ್ನು ಕಾಲಾನುಕ್ರಮವಾಗಿ ಧೈರ್ಯದಿಂದ ಜಾರಿಗೆ ತರಲು ಪ್ರಯತ್ನಿಸಬಾರದು ಏಕೆ ಎಂದು ಟ್ವೀಟ್ ಮೂಲಕ ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.


ಸಿಎಎಯನ್ನು ಹಿಂತೆಗೆದುಕೊಳ್ಳುವುದಿಲ್ಲ, ನಮಗೆ ಜನರ ಪ್ರತಿಭಟನೆಯಿಂದ ಭಯವಾಗುವುದಿಲ್ಲ, ಪ್ರತಿಭಟನೆಯ ಮಧ್ಯೆಯೇ ನಾವು ಹುಟ್ಟಿ ಬೆಳೆದವರು. ವಿರೋಧ ಪಕ್ಷದಲ್ಲಿದ್ದಾಗ ನಾವು ಇದನ್ನೇ ಹೇಳಿದ್ದು, ಈಗ ಅಧಿಕಾರದಲ್ಲಿರುವಾಗಲೂ ಅದನ್ನೇ ಹೇಳುತ್ತೇವೆ ಎಂದ ನಿನ್ನೆ ಲಕ್ನೊದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದ ಅಮಿತ್ ಶಾ ಸಿಎಎ ಬಗ್ಗೆ ಸಾರ್ವಜನಿಕ ಚರ್ಚೆಗೆ ಕರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com