ದೆಹಲಿ ಜನರಿಗಾಗಿ ಮನೆಯ ಹಿರಿಮಗನಂತೆ ಕೆಲಸ ಮಾಡಿದ್ದೇನೆ: ಕೇಜ್ರಿವಾಲ್

ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ರಾಷ್ಟ್ರ ರಾಜಧಾನಿಯ ಜನತೆಯ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕಳೆದ 70 ವರ್ಷಗಳಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು...

Published: 22nd January 2020 03:54 PM  |   Last Updated: 22nd January 2020 03:54 PM   |  A+A-


Arvind Kejriwal

ಅರವಿಂದ್ ಕೇಜ್ರಿವಾಲ್

Posted By : Lingaraj Badiger
Source : PTI

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ರಾಷ್ಟ್ರ ರಾಜಧಾನಿಯ ಜನತೆಯ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕಳೆದ 70 ವರ್ಷಗಳಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕು ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.

ದೆಹಲಿ ಜನತೆಯ ಜೀವನ ಸಮೃದ್ಧಗೊಳಿಸಲು ನಾವು ಶಕ್ತಿ ಮೀರಿ ಶ್ರಮಿಸಿದ್ದೇವೆ. ನೀರು ಮತ್ತು ವಿದ್ಯುತ್ ಅನ್ನು ಉಚಿತವಾಗಿ ನೀಡಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ಆದರೆ ಕಳೆದ 70 ವರ್ಷಗಳಿಂದ ಬಾಕಿ ಇರುವ ಕೆಲಸಗಳನ್ನು ಮಾಡಲು ನಮಗೆ ಇನ್ನೊಂದು ಅವಧಿಗೆ ಅವಕಾಶ ಬೇಕು ಎಂದರು.

ಇಂದು ಬದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಬಳಿಕ, ಜನರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ದೆಹಲಿ ಜನರಿಗಾಗಿ ನಾನು ಮನೆಯ ಹಿರಿಮಗನಂತೆ ಕೆಲಸ ಮಾಡಿದ್ದೇನೆ. ಹಿರಿಯ ಮಗ ಮನೆಯ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡು, ಎಲ್ಲರ ಕ್ಷೆಮವನ್ನು ನೋಡಿಕೊಳ್ಳುತ್ತಾನೆ. ಅದೇ ರೀತಿ ನಾನು ಸಹ ಕೆಲಸ ಮಾಡಿದ್ದೇನೆ ಎಂದರು.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp