ಅಸ್ಸಾಂ ನಲ್ಲಿ 644 ಉಗ್ರರ ಶರಣಾಗತಿ

ಅಸ್ಸಾಂ ನಲ್ಲಿ ನಿಷೇಧಗೊಂಡಿದ್ದ 8  ಉಗ್ರ ಸಂಘಟನೆಗಳಿಗೆ ಸೇರಿದ ಒಟ್ಟು 644 ಉಗ್ರರು ಶಸ್ತ್ರ ತ್ಯಜಿಸಿ ಶರಣಾಗಿದ್ದಾರೆ

Published: 23rd January 2020 06:53 PM  |   Last Updated: 23rd January 2020 06:53 PM   |  A+A-


644 militants surrender in Assam

ಅಸ್ಸಾಂ ನಲ್ಲಿ 644 ಉಗ್ರರ ಶರಣಾಗತಿ

Posted By : Srinivas Rao BV
Source : PTI

ಗುವಾಹಟಿ: ಅಸ್ಸಾಂ ನಲ್ಲಿ ನಿಷೇಧಗೊಂಡಿದ್ದ 8  ಉಗ್ರ ಸಂಘಟನೆಗಳಿಗೆ ಸೇರಿದ ಒಟ್ಟು 644 ಉಗ್ರರು ಶಸ್ತ್ರ ತ್ಯಜಿಸಿ ಶರಣಾಗಿದ್ದಾರೆ. 

ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ಉಗ್ರರು ಶರಣಾಗತರಾಗಿದ್ದು, ಉಗ್ರರ ಉಪಟಳ ಎದುರಿಸುತ್ತಿದ್ದ ಅಸ್ಸಾಂ ನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. 

ಯುಎಲ್ಎಫ್ಎ (ಐ) ಎನ್ ಡಿ ಎಫ್ ಬಿ, ಆರ್ ಎನ್ಎಲ್ ಎಫ್, ಕೆಎಲ್ಒ, ಸಿಪಿಐ (ಮಾವೊವಾದಿ)ಎನ್ಎಸ್ಎಲ್ಎ, ಎಡಿಎಫ್ ಹಾಗೂ ಎನ್ ಎಲ್ಎಫ್ ಬಿ ಉಗ್ರ ಸಂಘಟನೆಗಳ ಉಗ್ರರು ಶರಣಾಗಿದ್ದಾರೆ. 

ಶರಣಾಗಿರುವವರ ಪೈಕಿ ಯುಎಲ್ಎಫ್ಎ (ಇಂಡಿಪೆಂಡೆಂಟ್) ನ 50 ಉಗ್ರರು, ಎನ್ ಡಿಎಫ್ ಬಿಯ 8 ಉಗ್ರರು ಆದಿವಾಸಿ ಡ್ರಾಗನ್ ಫೈಟರ್ ನಿಂದ 178 ಉಗ್ರರು ಇದ್ದಾರೆ. ಶರಣಾದವರ ನಡೆಯನ್ನು ಸ್ವಾಗತಿಸಿರುವ ಸಿಎಂ, ದೇಶ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp