ಸಿಎಎ ವಿರೋಧಿ ಪ್ರತಿಭಟನೆ: ಮತ್ತೊಂದು ಶಾಹೀನ್ ಬಾಗ್ ಕೋಟಾದ ಕಿಶೋರ್ ಪುರ 

ದೇಶದ ಕೋಚಿಂಗ್ ಹಬ್ ಕೋಟಾ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ ಮತ್ತೊಂದು ಶಾಹೀನ್ ಬಾಗ್ ಆಗಿ ಪರಿವರ್ತನೆಯಾಗಿದೆ. 
ಕೋಟಾದಲ್ಲಿನ ಈದ್ಗಾ ಮೈದಾನದಲ್ಲಿ ಮಹಿಳೆಯರ ಪ್ರತಿಭಟನೆ
ಕೋಟಾದಲ್ಲಿನ ಈದ್ಗಾ ಮೈದಾನದಲ್ಲಿ ಮಹಿಳೆಯರ ಪ್ರತಿಭಟನೆ

ಜೈಪುರ: ದೇಶದ ಕೋಚಿಂಗ್ ಹಬ್ ಕೋಟಾ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ ಮತ್ತೊಂದು ಶಾಹೀನ್ ಬಾಗ್ ಆಗಿ ಪರಿವರ್ತನೆಯಾಗಿದೆ. 

ತೀವ್ರ ಚಳಿಯನ್ನು ಲೆಕ್ಕಿಸದೆ ಇಲ್ಲಿನ ಈದ್ಗಾ ಮೈದಾನದಲ್ಲಿ ನೂರಾರು ಮಹಿಳಾ ಕಾರ್ಯಕರ್ತರು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಒಂಬತ್ತು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರದರ್ಶನ ಫಲಕ, ಪೋಸ್ಟರ್ ಗಳು ಹಾಗೂ ಬ್ಯಾನರ್ ಗಳನ್ನು ಹಿಡಿದ ಪ್ರತಿಭಟನಾಕಾರರು, ವಿವಾದಾತ್ಮಾಕ ಕಾನೂನಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಂಜೆ ವೇಳೆಯಲ್ಲಿ ನಗರದ ಎಲ್ಲಾ ಪ್ರದೇಶಗಳ ಮಹಿಳೆಯರು ಇಲ್ಲಿ ಸೇರುತ್ತಿದ್ದು, ಕೆಲ ದಿನಗಳಿಂದಲೂ ಪ್ರತಿಭಟನೆ ಮುಂದುವರೆದಿದೆ.  ಕಿಶೋರ್ ಪುರ ಈದ್ಗಾ ಮೈದಾನದ ಸಮೀಪದಲ್ಲಿಯೇ ಲೋಕಸಭಾ ಸ್ಪೀಕರ್  ಓಂ ಬಿರ್ಲಾ ಅವರ ಮನೆಯಿರುವುದು ಕುತೂಹಲಕರವಾಗಿ ವಿಚಾರವಾಗಿದೆ. ಅವರು ಕೋಟಾದ ಸಂಸದರಾಗಿದ್ದಾರೆ.

ಶಾಹೀನ್ ಬಾಗ್  ಪ್ರತಿಭಟನೆಯಿಂದ ಪ್ರೇರಿತಗೊಂಡ ನೆರೆಹೊರೆಯ ಜನರು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಆಹಾರ,  ಬ್ಲಾಂಕೆಟ್ ಗಳನ್ನು ಒದಗಿಸುತ್ತಿದ್ದಾರೆ. 

ಅನೇಕ ಹಿರಿಯ ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಿಎಎ  ಹಾಗೂ ಎನ್ ಆರ್ ಸಿ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ಶಾಹೀನ್ ಬಾಗ್ ಪ್ರತಿಭಟನೆಯಿಂದ ಪ್ರೇರಿತಗೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸಂಚಾಲಕಿ ಸೈಫಾ ಖಲೀದ್ ಹೇಳಿದ್ದಾರೆ.

ಅನೇಕ ಸ್ವಯಂ ಸೇವಾ ಸಂಸ್ಥೆಗಳು ಪ್ರತಿಭಟನೆ ಬೆಂಬಲಿಸಿದ್ದು, ಮಕ್ಕಳು, ಮನೆ ಸದಸ್ಯರು ಕೂಡಾ ಪ್ರತಿಭಟನೆಗೆ ಆಗಮಿಸಲಿದ್ದಾರೆ ಎಂದು ಬಹುತೇಕ ಮಹಿಳೆಯರು ಹೇಳಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡಾ ಸಿಎಎಯನ್ನು ಬಲವಾಗಿ ವಿರೋಧಿಸಿದ್ದು, ರಾಜಸ್ಥಾನದಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದಿದ್ದಾರೆ.

ಕೇರಳ, ಪಂಜಾಬ್ ನಂತರ ರಾಜಸ್ಥಾನದಲ್ಲೂ ಸಿಎಎ ವಿರುದ್ಧದ ನಿರ್ಣಯ ಅಂಗೀಕರಿಸಲು ಎದುರು ನೋಡಲಾಗುತ್ತಿದೆ. ಜನವರಿ 24 ರಂದು ವಿಧಾನ ಮಂಡಲದ ವಿಶೇಷ ಅಧಿವೇಶನವೊಂದನ್ನು ಕರೆಯಲಾಗಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 28 ರಂದು ಜೈಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com