ಜೈಲಿನಿಂದ ಹೊರಬಂದ ಕೆಲ ಗಂಟೆಯಲ್ಲೇ ಹಾರ್ದಿಕ್ ಪಟೇಲ್‍ನನ್ನು ಮತ್ತೆ ಬಂಧಿಸಿದ ಪೊಲೀಸರು

ಪಟಿದಾರ್ ಮೀಸಲಾತಿ  ಹೋರಾಟ ಸಮಿತಿಯ ಮಾಜಿ ಸಂಚಾಲಕ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು  ಸಬರಮತಿ ಕೇಂದ್ರೀಯ ಕಾರಾಗೃಹದಿಂದ  ಬಿಡುಗಡೆಗೊಂಡ ಕೂಡಲೇ  ಅವರನ್ನು ಗುರುವಾರ ಪೊಲೀಸರು ಮರು ಬಂಧಿಸಿದ್ದಾರೆ.

Published: 23rd January 2020 06:24 PM  |   Last Updated: 23rd January 2020 06:24 PM   |  A+A-


hardik patel

ಹಾರ್ದಿಕ್ ಪಟೇಲ್

Posted By : Vishwanath S
Source : UNI

ಅಹಮದಾಬಾದ್: ಪಟಿದಾರ್ ಮೀಸಲಾತಿ  ಹೋರಾಟ ಸಮಿತಿಯ ಮಾಜಿ ಸಂಚಾಲಕ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು  ಸಬರಮತಿ ಕೇಂದ್ರೀಯ ಕಾರಾಗೃಹದಿಂದ  ಬಿಡುಗಡೆಗೊಂಡ ಕೂಡಲೇ  ಅವರನ್ನು ಗುರುವಾರ ಪೊಲೀಸರು ಮರು ಬಂಧಿಸಿದ್ದಾರೆ.

ತಾಂತ್ರಿಕ ಕಾರಣದಿಂದ ಬುಧವಾರ  ಹಾರ್ದಿಕ್ ಪಟೇಲ್ ಕಾರಾಗೃಹದಿಂದ ಬಿಡುಗಡೆಗೊಳ್ಳಲು ಸಾಧ್ಯವಾಗಿರಲಿಲ್ಲ, ಗುರುವಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಜೈಕಾರದ ಘೋಷಣೆ ನಡುವೆಯೇ ಗಾಂಧಿನಗರದ ಮನ್ಸಾದಲ್ಲಿ ಶಾಂತಿ ಭಂಗ ಉಂಟುಮಾಡಿದ್ದ ಪ್ರಕರಣ ಸಂಬಂಧ  ಪೊಲೀಸರು ಅವರನ್ನು ಮತ್ತೆ ಬಂಧಿಸಿದರು. ಮುಂದಿನ ಕ್ರಮ ಕೈಗೊಳ್ಳಲು ಅಲ್ಲಿಂದ ಕರೆದೊಯ್ದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. 

2017ರ ಸರ್ಕಾರಿ ಆದೇಶ ಉಲ್ಲಂಘಿಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉತ್ತರ ಗುಜರಾತ್ ಪಟಾನ್ ಜಿಲ್ಲೆಯ ಸಿದ್ಧಾಪುರ್ ಗೆ ಹಾರ್ದಿಕ್ ಪಟೇಲ್ ಅವರನ್ನು  ಕರೆದೊಯ್ಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಪ್ರಕರಣಗಳಲ್ಲಿ ಜಾಮೀನು ಸಹಿತ ವಿವಿಧ ಕಲಂಗಳಡಿ ಹಾರ್ದಿಕ್ ಅವರನ್ನು ಬಂಧಿಸಲಾಗಿದ್ದು  ಅವರಿಗೆ ಜಾಮೀನು ದೊರೆಯುವ ಸಾಧ್ಯತೆಯಿದ್ದು, ನಂತರವಷ್ಟೇ  ಅವರು ಬಿಡುಗಡೆಯಾಗುವ  ಸಾಧ್ಯತೆಯಿದೆ.

2015ರ ಆಗಸ್ಟ್ 25ರಂದು  ಇಲ್ಲಿನ ಜಿಡಿಎಂಸಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪಟಿದಾರ್ ಮೀಸಲಾತಿ ಸಮಾವೇಶ ನಡೆಸಿದ ನಂತರ  ನಡೆದ ವ್ಯಾಪಕ ಹಿಂಸಾಚಾರ ಸಂಬಂಧ  ಅಹಮದಾಬಾದ್  ಅಪರಾಧ ವಿಭಾಗದ ಪೊಲೀಸರು  ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್  ವಿರುದ್ದ  ದೇಶ ದ್ರೋಹದ  ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಠಾಣೆಗೆ ಹಾಜರಾಗದೇ ತಲೆ  ಮರೆಸಿಕೊಂಡಿದ್ದರು. ಈ ಹಿನ್ನೆಲೆ ಅಹಮದಾಬಾದ್ ನ ಪೊಲೀಸರು, ಪಟೇಲ್ ರನ್ನು ವೀರಂಗಂ  ಗ್ರಾಮದಲ್ಲಿ ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದರು ಅಹಮದಾಬಾದ್ ಸೆಷನ್ಸ್  ಕೋರ್ಟ್, ಹಾರ್ದಿಕ್ ಪಟೇಲ್ ಗೆ ಈ ತಿಂಗಳ 24ರ ವರೆಗೆ  ನ್ಯಾಯಾಂಗ  ಕಸ್ಟಡಿಗೆ  ಒಪ್ಪಿಸಿತ್ತು.

Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp