ಪಬ್ ಜಿ ವ್ಯಸನ ಪರಿಣಾಮ: ಮನೆ, ಕಾರುಗಳಿಗೆ ಕಲ್ಲು ತೂರುತ್ತಿದ್ದ ಯುವಕ ಈಗ ಪೊಲೀಸ್ ವಶದಲ್ಲಿ! 

ಪಬ್ ಜಿ  ವ್ಯಸನಕ್ಕೆ ತುತ್ತಾಗಿದ್ದ ಯುವಕನೋರ್ವನನ್ನು ಪೊಲೀಸರು ಕೈ ಕಟ್ಟಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. 

Published: 23rd January 2020 01:51 PM  |   Last Updated: 23rd January 2020 01:51 PM   |  A+A-


Inspired by PUBG teenager throws rocks at cars, houses; police ties him with rope

ಪಬ್ ಜಿ ವ್ಯಸನ ಪರಿಣಾಮ: ಮನೆ, ಕಾರುಗಳಿಗೆ ಕಲ್ಲು ತೂರುತ್ತಿದ್ದ ಯುವಕ ಈಗ ಪೊಲೀಸ್ ವಶದಲ್ಲಿ!

Posted By : Srinivas Rao BV
Source : The New Indian Express

ವಿಜಯಪುರ: ಪಬ್ ಜಿ  ವ್ಯಸನಕ್ಕೆ ತುತ್ತಾಗಿದ್ದ ಯುವಕನೋರ್ವನನ್ನು ಪೊಲೀಸರು ಕೈ ಕಟ್ಟಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. 

ವಿಜಯಪುರದ ಲಕ್ಷ್ಮಿನಗರದ ನಿವಾಸಿ ಮಲ್ಲಿಕಾರ್ಜುನ ಚಂದ್ರಕಾಂತ್ ಬಂಧಿತ ಯುವಕ. ಈತ ಅರೆ ನಗ್ನ ಸ್ಥಿತಿಯಲ್ಲಿ ಮನೆ, ಕಾರುಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ಕೈಗಳನ್ನು ಕಟ್ಟಿ ವೈದ್ಯಕೀಯ ನೆರವಿಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಈ ಯುವಕ ಪಬ್ ಜಿ ಗೇಮ್ ನ ಗೀಳು ಹತ್ತಿಸಿಕೊಂಡಿದ್ದ ಇದರಿಂದಲೇ ಪ್ರೇರಣೆಗೊಂಡು ಕಾರು, ಮನೆಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದ. ಪಬ್ ಜಿ ಗೇಮ್ ನಲ್ಲಿ ಎದುರಾಳಿಗಳತ್ತ ಸೇಬು ಹಣ್ನು ಎಸೆಯುವುದು ಇದೆ. ಆದರೆ ಕಲ್ಲಿನಿಂದ ಹೊಡೆಯುವುದು ಇಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. 

ಈ ಯುವಕನ ಪಬ್ ಜಿ ಗೀಳಿನಿಂದ ಒಂದಷ್ಟು ಮನೆ, ಕಾರುಗಳಿಗೆ ಹಾನಿ ಉಂಟಾಗಿದೆ. ಆತ ಪಬ್ ಜಿ ಗೇಮ್ ವ್ಯಸನಕ್ಕೆ ಒಳಗಾಗಿದ್ದ ಕಾರಣ ಯಾವ ಪ್ರಕರಣವನ್ನೂ ದಾಖಲಿಸಲಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳಿಯರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp