'ಸಾವಿನ ಭಯ' ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಗಳ ರಂಪಾಟ, ಕೊನೆ ಆಸೆಗೆ ನಕಾರ!

ನಿರ್ಭಯಾ ಅತ್ಯಾಚಾರಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರೂ ನೇಣು ಕುಣಿಕೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ಅಪರಾಧಿಗಳಿಗೆ ಇದೀಗ ಸಾವಿನ ಭಯ ಶುರುವಾಗಿದ್ದು ಜೈಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅಲ್ಲದೆ ತಮ್ಮ ಕೊನೆಯ ಆಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

Published: 23rd January 2020 03:24 PM  |   Last Updated: 23rd January 2020 03:24 PM   |  A+A-

Nirbhaya Convicts

ನಿರ್ಭಯಾ ಅತ್ಯಾಚಾರಿಗಳು

Posted By : Vishwanath S
Source : Online Desk

ನಿರ್ಭಯಾ ಅತ್ಯಾಚಾರಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರೂ ನೇಣು ಕುಣಿಕೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ಅಪರಾಧಿಗಳಿಗೆ ಇದೀಗ ಸಾವಿನ ಭಯ ಶುರುವಾಗಿದ್ದು ಜೈಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅಲ್ಲದೆ ತಮ್ಮ ಕೊನೆಯ ಆಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.  

ದೆಹಲಿ ಕೋರ್ಟ್ ಇದೀಗ ಎರಡನೇ ಬಾರಿಗೆ ಅಪರಾಧಿಗಳಿಗೆ ಡೆತ್ ವಾರೆಂಟ್ ಹೊರಡಿಸಿದೆ. ಜನವರಿ 21ಕ್ಕೆ ಮೊದಲಿಗೆ ಡೆತ್ ವಾರೆಂಟ್ ಜಾರಿ ಮಾಡಲಾಗಿತ್ತು. ಆದರೆ ನಾಲ್ವರು ಅಪರಾಧಿಗಳ ಪೈಕಿ ಒಬ್ಬ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಈ ದಿನಾಂಕ ಮುಂದಕ್ಕೆ ಹೋಗಿ ಇದೀಗ ಫೆ.1ಕ್ಕೆ ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ. 

ಈ ನಡುವೆ ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪ್ ಹಾಗೂ ಕೆಲೆ ಪ್ರಕರಣದ ದೋಷಿ ಪವನ್ ಗುಪ್ತಾ ಹೊಸ ದಾಳವನ್ನು ಉರುಳಿಸಿದ್ದು, ಅತ್ಯಾಚಾರ ನಡೆದಾಗ ನಾನು ಅಪ್ರಾಪ್ತ ಬಾಲಕನಾಗಿದ್ದೆ ಎಂದು ಹೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ನನ್ನನ್ನು ಬಾಲಾರೋಪಿ ಎಂದು ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?

Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp