ಆಜಾದಿ ಪರ ಘೋಷಣೆ ಕೂಗುವವರ ವಿರುದ್ಧ ದೇಶದ್ರೋಹ ಪ್ರಕರಣ: ಸಿಎಎ ಪ್ರತಿಭಟನಾಕಾರರಿಗೆ ಯೋಗಿ ಆದಿತ್ಯನಾಥ್

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಟೀಕಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮನೆಯಲ್ಲಿ ಕುಳಿತ ಪುರುಷರು, ಪ್ರತಿಭಟನೆ ನಡೆಸಲು ಮಕ್ಕಳು ಹಾಗೂ ಮಹಿಳೆಯರನ್ನು ಬೀದಿಗೆ ಕಳುಹಿಸುತ್ತಿರುವುದು ನಾಚಿಕೆಗೇಡುತನ ಎಂದು ಹೇಳಿದ್ದಾರೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಕಾನ್ಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಟೀಕಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮನೆಯಲ್ಲಿ ಕುಳಿತ ಪುರುಷರು, ಪ್ರತಿಭಟನೆ ನಡೆಸಲು ಮಕ್ಕಳು ಹಾಗೂ ಮಹಿಳೆಯರನ್ನು ಬೀದಿಗೆ ಕಳುಹಿಸುತ್ತಿರುವುದು ನಾಚಿಕೆಗೇಡುತನ ಎಂದು ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರತಿಭಟನೆಯಲ್ಲಿ ಭಾಗವಹಿಸಲು ಧೈರ್ಯವಿಲ್ಲದವರು, ಗಲಭೆಯಲ್ಲಿ ತೊಡಗಿದರೆ ಅವರ ಆಸ್ತಿಪಾಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಎಂದು ಇದೀಗ ಏನು ಮಾಡಿದ್ದಾರೆ ನೋಡಿ. ಮನೆಯಲ್ಲಿ ಕುಳಿತುಕೊಂಡು ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿಭಟನೆ ನಡೆಸಲು ಬೀದಿಗೆ ಕಳುಹಿಸಿದ್ದಾರೆ. ಇದು ನಾಚಿಕೆಗೇಡಿನ ಕೆಲಸ ಎಂದು ಹೇಳಿದ್ದಾರೆ. 

ದೆಹಲಿ ಶಹೀನ್ ಭಾಗ್ ಹಾಗೂ ಲಖನೌನಲ್ಲಿ ಮಹಿಳೆಯರು ಪೌರತ್ವ ಕಾಯ್ದೆ ವಿರುದ್ಧ ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಳ್ಳಲಾಗಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ದೇಶವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಪ್ರಸ್ತುತ ಪ್ರತಿಭಟನೆ ನಡೆಸುತ್ತಿರುವವರಿಗೆ ಪೌರತ್ವ ಕಾಯ್ದೆ ಬಗ್ಗೆ ತಿಳುವಳಿಕೆಯೇ ಇಲ್ಲ. ಪ್ರತಿಭಟನೆ ನಡೆಸುತ್ತಿರುವವರಿಗೆ ಪ್ರಶ್ನೆ ಮಾಡಿದರೆ, ನಿಮಗೇ ತಿಳಿಯುತ್ತದೆ. ಪ್ರತಿಭಟನೆ ನಡೆಸುತ್ತಿರುವವರಿಗೆ ದೇಶದ ಮುಖ್ಯವಲ್ಲ. ಸಿಖ್ಖರು, ಹಿಂದೂಗಳು, ಬೌದ್ಧರು, ಜೈನರು ಹಾಗೂ ಪಾರ್ಸಿಗಳು ಅವರಿಗೆ ಮುಖ್ಯರಲ್ಲ. ಇದೀಗ ಕಾಂಗ್ರೆಸ್ ನವರಿಗೆ ಕ್ರಿಶ್ಚಿಯನ್ನರು ಕೂಡ ಮುಖ್ಯರಲ್ಲ. ಐಎಸ್ಐ ಏಜೆಂಟ್ ಗಳು ಭಾರತ ಪ್ರವೇಶಿಸಲು ಅನುಮತಿ ನೀಡುವವರೆಗೂ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆಂದು ಅವರು ಹೇಳುತ್ತಾರೆ. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆ ನಿಜಕ್ಕೂ ನಾಚಿಕೆಗೇಡಿತನ ಎಂದು ತಿಳಿಸಿದ್ದಾರೆ. 

ಪ್ರತಿಭಟನೆ ನಡೆಸುವುದು ಪ್ರತೀಯೊಬ್ಬರ ಹಕ್ಕು ಹೌದು, ಆದರೆ, ಸಾರ್ವಜಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದರೆ, ಪ್ರತಿಭಟನಾಕಾರರ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತದೆ. ಇದರಿಂದ ಮುಂದಿನ ಪೀಳಿಗೆಗೂ ಶಿಕ್ಷೆಯ ಪಾಠವಾಗುತ್ತದೆ ಎಂದಿದ್ದಾರೆ. 

ಭಾರತದ ಮಣ್ಣು ಪ್ರಮುಖವಾಗಿ ಉತ್ತರಪ್ರದೇಶದ ಮಣ್ಣಿನಲ್ಲಿ ಆಜಾದಿ ಪರ ಘೋಷಣೆ ಕೂಡುವ ಪ್ರತಿಭಟನಾಕಾರರು, ಕಾಶ್ಮೀರವನ್ನು ಬಳಕೆ ಮಾಡಿಕೊಳ್ಳುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತದೆ. ಭಾರತದಲ್ಲಿದ್ದುಕೊಂಡೇ ದೇಶದ ವಿರುದ್ದ ಪಿತೂರಿ ನಡೆಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com