ಎಂಎನ್‌ಎಸ್ ಹೊಸ ಕೇಸರಿ ಧ್ವಜ ಅನಾವರಣ, ರಾಜ್ ಠಾಕ್ರೆ ಪುತ್ರ ಅಮಿತ್ ಪಕ್ಷಕ್ಕೆ ಸೇರ್ಪಡೆ

ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನಾಚರಣೆಯಂದೇ  ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಹೊಸ ಧ್ವಜ ಅನಾವರಣ ಮಾಡಿದ್ದಾರೆ. 
ಅಮಿತ್ ಠಾಕ್ರೆ
ಅಮಿತ್ ಠಾಕ್ರೆ

ಮುಂಬೈ: ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನಾಚರಣೆಯಂದೇ  ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಹೊಸ ಧ್ವಜ ಅನಾವರಣ ಮಾಡಿದ್ದಾರೆ. 

ಹೊಸ ಕೇಸರಿ ಧ್ವಜದ ಮಧ್ಯಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆ ಹೊಂದಿದೆ. ರಾಜಮುದ್ರೆ ಎಂಬುದು ಅಧಿಕೃತ ಚತ್ರಪತಿ ಶಿವಾಜಿ ಮಹಾರಾಜರು ಪತ್ರಗಳಲ್ಲಿ ಬಳಸುತ್ತಿದ್ದ ರಾಜಮುದ್ರೆಯಾಗಿದೆ.

ಎಂಎನ್ಎಸ್ ಪಕ್ಷ ಇಲ್ಲಿನ ಗೋರೆಗಾಂವ್‌ನ ನೆಸ್ಕೋ ಮೈದಾನದಲ್ಲಿ 'ಮಹಾ ಅಧಿವೇಶನ ಆರಂಭಿಸಿದ್ದು, ಇದಕ್ಕು ಮುನ್ನ ಠಾಕ್ರೆ ಬಿ ಆರ್ ಆರ್ ಅಂಬೇಡ್ಕರ್, ಪ್ರಬೋಧಂಕರ್ ಠಾಕ್ರೆ, ಛತ್ರಪತಿ ಶಿವಾಜಿ ಮಹಾರಾಜ್, ಸಾವರ್ಕರ್ ಅವರ ಭಾವಚಿತ್ರಕ್ಕೆ ಹಾರ ಹಾಕುವ ಮೂಲಕ ಮಹಾ ಅಧಿವೇಶನಕ್ಕೆ ಚಾಲನೆ ನೀಡಿದರು. 

ಮಹಾ ಅಧಿವೇಶನದಲ್ಲಿ, ಠಾಕ್ರೆ ಅವರ ತಾಯಿ ಕುಂದಾ, ಪತ್ನಿ ಶರ್ಮಿಳಾ ಮತ್ತು ಮಗ ಅಮಿತ್ ಸೇರಿದಂತೆ ಅವರ ಕುಟುಂಬ ಸದಸ್ಯರಿದ್ದರು. ನಂತರ, ಹಿರಿಯ ನಾಯಕ ಬಾಲಾ ನಂದಗಾಂವ್ಕರ್ ಅವರು ನಿರ್ಣಯವನ್ನು ಅಂಗೀಕರಿಸಿದರು ಮತ್ತು ಅಮಿತ್ ಠಾಕ್ರೆ ಅವರನ್ನು ಎಂಎನ್ಎಸ್ ನಾಯಕರಾಗಿ ಘೋಷಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com