ಎನ್ ಆರ್ ಸಿಗೆ ಪರ್ಯಾಯ: ಎನ್ ಆರ್ ಯು ಪ್ರಾರಂಭಿಸಲಿರುವ ಕಾಂಗ್ರೆಸ್! 

ರಾಷ್ಟ್ರೀಯ ಪೌರರ ನೋಂದಣಿ (ಎನ್ ಆರ್ ಸಿ) ಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ಯುವ ಘಟಕ ಎನ್ ಆರ್ ಯು ಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. 

Published: 23rd January 2020 12:48 PM  |   Last Updated: 23rd January 2020 12:48 PM   |  A+A-


Youth Congress to launch 'National Register of Unemployment'

ಎನ್ ಆರ್ ಸಿಗೆ ಪರ್ಯಾಯ: ಎನ್ ಆರ್ ಯು ಪ್ರಾರಂಭಿಸಲಿರುವ ಕಾಂಗ್ರೆಸ್!

Posted By : Srinivas Rao BV
Source : PTI

ನವದೆಹಲಿ: ರಾಷ್ಟ್ರೀಯ ಪೌರರ ನೋಂದಣಿ (ಎನ್ ಆರ್ ಸಿ) ಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ಯುವ ಘಟಕ ಎನ್ ಆರ್ ಯು ಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. 

ದೇಶದಲ್ಲಿ ಏರಿಕೆಯಾಗುತ್ತಿರುವ ನಿರುದ್ಯೋಗ ಸಮಸ್ಯೆಯ ಕುರಿತು ದೇಶದ ಗಮನ ಸೆಳೆಯುವುದಕ್ಕೆ ಕಾಂಗ್ರೆಸ್ ಎನ್ ಆರ್ ಯು ಪ್ರಾರಂಭಿಸಲಿದೆ. 

ಎನ್ ಆರ್ ಯು ಅಂದರೆ ನ್ಯಾಷನಲ್ ರಿಜಿಶ್ತರ್ ಆಫ್ ಅನ್ ಎಂಪ್ಲಾಯ್ಡ್. ನಿರುದ್ಯೋಗಿಗಳ ನೋಂದಣಿ ಮಾಡುವ ಮೂಲಕ ಇದನ್ನು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಅಸ್ತ್ರವನ್ನಾಗಿ ಮಾಡಿಕೊಳ್ಳಲಿದೆ.

ದೇಶಾದ್ಯಂತ ನಿರುದ್ಯೋಗಿಗಳ ನೋಂದಣಿ (ಎನ್ ಆರ್ ಯು) ಅಭಿಯಾನ ಪ್ರಾರಂಭಗೊಳ್ಳಲಿದೆ ಎಂದು ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಬಿವಿ ಶ್ರೀನಿವಾಸ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp