ದೇಶದಲ್ಲಿ ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಬೇರುಗಳನ್ನು ಆಳವಾಗಿಸುತ್ತದೆ: ಪ್ರಣಬ್ ಮುಖರ್ಜಿ 

ಪ್ರಜಾಪ್ರಭುತ್ವದಲ್ಲಿ ಕೇಳುವುದು, ಚರ್ಚಿಸುವುದು, ವಾದಿಸುವುದು ಮತ್ತು ಭಿನ್ನಾಭಿಪ್ರಾಯಗಳು ಇರುವುದು ಅದರ ಸಾರವಾಗಿದೆ ಎಂದರು.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ನವದೆಹಲಿ: ಕೇಳುವುದು, ವಾದಿಸುವುದು ಮತ್ತು ಭಿನ್ನಾಭಿಪ್ರಾಯ ಇರುವುದು ಪ್ರಜಾಪ್ರಭುತ್ವದ ಸಾರ ಎಂದು ಪ್ರದಿಪಾದಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶಾದ್ಯಂತ ಕಂಡುಬರುತ್ತಿರುವ ಈಗಿನ ಶಾಂತಿಯುತ ಪ್ರತಿಭಟನೆಗಳು ಭಾರತದಲ್ಲಿ ಪ್ರಜಾಪ್ರಭುತ್ವ ಆಳವಾಗಿ ಬೇರೂರುವಂತೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.


ಭಾರತದಲ್ಲಿ ಪ್ರಜಾಪ್ರಭುತ್ವದ ಸಾರವನ್ನು ಮತ್ತೆ ಮತ್ತೆ ಹೇಳಬೇಕಾದ ಅಗತ್ಯವಿದ್ದರೂ ಕೂಡ, ನಿರಂಕುಶಾಧಿಕಾರವು ಮಹತ್ವ ಪಡೆಯುತ್ತಿರುವುದರ ಬಗ್ಗೆ ಕೂಡ ಎಚ್ಚರಿಕೆ ಮೂಡಿಸಿದ್ದಾರೆ.


ಭಾರತೀಯ ಚುನಾವಣಾ ಆಯೋಗ ಏರ್ಪಡಿಸಿದ್ದ ಸುಕುಮಾರ್ ಸೇನ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡುತ್ತದೆ. ಇಲ್ಲಿ ಸಹಮತ ಪ್ರಜಾಪ್ರಭುತ್ವದ ಜೀವನಾಡಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ದೇಶದ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಅವರು ಮಾತನಾಡಿ,ಕಳೆದ ಕೆಲ ತಿಂಗಳಲ್ಲಿ ದೇಶದಲ್ಲಿನ ಜನರು ಅದರಲ್ಲೂ ಮುಖ್ಯವಾಗಿ ಯುವಜನತೆ ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದು ತಮ್ಮ ದೃಷ್ಟಿಯಲ್ಲಿ ಬಹಳ ಮುಖ್ಯ ಎಂಬ ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಭಾರತದ ಸಂವಿಧಾನದ ಬಗ್ಗೆ ಅವರ ಪ್ರತಿಪಾದನೆ ಮತ್ತು ನಂಬಿಕೆ ವಿಶೇಷವಾಗಿ ಹೃದಯಸ್ಪರ್ಶಿಯೆನಿಸುತ್ತಿದೆ ಎಂದರು. 


ಪ್ರಜಾಪ್ರಭುತ್ವದಲ್ಲಿ ಕೇಳುವುದು, ಚರ್ಚಿಸುವುದು, ವಾದಿಸುವುದು ಮತ್ತು ಭಿನ್ನಾಭಿಪ್ರಾಯಗಳು ಇರುವುದು ಅದರ ಸಾರವಾಗಿದೆ ಎಂದರು.


ನಂತರ ಅವರು ಮಾಡಿದ ಭಾಷಣದ ಪ್ರತಿ ಸಿಕ್ಕಿದ್ದು ಅದರಲ್ಲಿ ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಆಳವಾಗಿಸುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com