ಕಾಶ್ಮೀರ: ಗೃಹ ಬಂಧನದಲ್ಲಿರುವ ಈ ನಾಯಕ ಯಾರು ಗೊತ್ತಾ?
2019ರ ಆಗಸ್ಟ್ ತಿಂಗಳಿನಿಂದ ಗೃಹ ಬಂಧನದಲ್ಲಿದಲ್ಲಿರುವ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಹೊಸ ಗೆಟಪ್ ನ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Published: 25th January 2020 05:56 PM | Last Updated: 25th January 2020 08:39 PM | A+A A-

ಒಮರ್ ಅಬ್ದುಲ್ಲಾ
ಜಮ್ಮು-ಕಾಶ್ಮೀರ: 2019ರ ಆಗಸ್ಟ್ ತಿಂಗಳಿನಿಂದ ಗೃಹ ಬಂಧನದಲ್ಲಿದಲ್ಲಿರುವ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಹೊಸ ಗೆಟಪ್ ನ ಮೊದಲ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ಕ್ಲೀನ್ ಶೇವ್ ನಲ್ಲಿರುತ್ತಿದ್ದ ಒಮರ್ ಅಬ್ದುಲ್ಲಾ , ಉದ್ದದ ಬಿಳಿ ಗಡ್ಡ ಬಿಟ್ಟಿರುವುದು ಈ ಪೋಟೋದಲ್ಲಿದೆ. ಅನೇಕ ಟ್ವಿಟಿಗರು ಈ ಪೋಟೋವನ್ನು ಶೇರ್ ಮಾಡಿದ್ದಾರೆ. ಆದಾಗ್ಯೂ, ಈ ಪೋಟೋ ಅವರದ್ದೇ ಎಂಬುದು ದೃಢಪಟ್ಟಿಲ್ಲ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಮುನ್ನ ದಿನವಾದ ಆಗಸ್ಟ್ 4 ರಿಂದಲೂ ಒಮರ್ ಅಬ್ದುಲ್ಲಾ ಹಾಗೂ ಅವರ ತಂದೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಬಂಧನದಲ್ಲಿದ್ದಾರೆ.
ಕೆಲ ಟ್ವಿಟಿಗರು ಒಮರ್ ಅಬ್ದುಲ್ಲಾ ಅವರ ಹೊಸ ಗೆಟಪ್ ಗೆ ಮೆಚ್ಚುಗೆ ಸೂಚಿಸಿದ್ದರೆ, ಮತ್ತೆ ಕೆಲವರು ಅಬ್ದುಲ್ಲಾ ಅವರನ್ನು ಬಂಧನದಲ್ಲಿ ಇಟ್ಟಿರುವುದನ್ನು ಖಂಡಿಸಿದ್ದಾರೆ. ಮತ್ತೆ ಕೆಲವರು ಭರವಸೆ ಕಳೆದುಕೊಳ್ಳದಂತೆ ಧೈರ್ಯ ತುಂಬಿದ್ದಾರೆ.
ಈ ಮಧ್ಯೆ ಒಮರ್ ಅಬ್ದುಲಾ ಅವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
I could not recognize Omar in this picture. Am feeling sad. Unfortunate that this is happening in our democratic country. When will this end ? pic.twitter.com/lbO0PxnhWn
— Mamata Banerjee (@MamataOfficial) January 25, 2020