ಜಮ್ಮು-ಕಾಶ್ಮೀರ: ಗಣರಾಜ್ಯೋತ್ಸವ ಬೆನ್ನಲ್ಲೇ ಸೇನೆಯಿಂದ ಭರ್ಜರಿ ಬೇಟೆ, 3 ಉಗ್ರರ ಹತ್ಯೆ

ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ನಡುವಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ನಡುವಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ. 

ಜಮ್ಮು ಮತ್ತು ಕಾಶ್ಮೀರ ಅವಂತಿಪೋರಾದಲ್ಲಿ ಜೈಷ್ಇಮೊಹಮ್ಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿದಂತೆ ಮತ್ತಿಬ್ಬರು ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದವು.

ಈ ವೇಳೆ ಉಗ್ರರು ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಕಾರ್ಯಾಚರಣೆಯನ್ನು ಎನ್'ಕೌಂಟರ್ ಆಗಿ ಬದಲಿಸಿದ ಸೇನಾಪಡೆ, ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. 

ಜೆಇಎಂ ಟಾಪ್ ಕಮಾಂಡರ್ ಖ್ವಾರಿ ಯಾಸಿರ್, ಬುರ್ಹಾನ್ ಶೇಖ್ ಹಾಗೂ ಮೂಸಾ ಅಬು ಉಸ್ಮಾನ್ ಹತ್ಯೆಯಾದ ಉಗ್ರರೆಂದು ವರದಿಗಳು ತಿಳಿಸಿವೆ. 

ಪ್ರಸ್ತುತ ಹತ್ಯೆಯಾಗಿರುವ ಜೆಇಎಂ ಟಾಪ್ ಕಮಾಂಡರ್ ಯಾಸಿರ್, 2019ರಲ್ಲಿ ಪುಲ್ವಾಮದಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com