ಹೀಗಾದರೆ ಪಾಕಿಸ್ತಾನ ಪಿತಾಮಹ ಜಿನ್ನಾ ಅವರ ಲುವು ಸಂಪೂರ್ಣವಾದಂತೆ-ಶಶಿ ತರೂರ್ ಹೇಳಿದ್ದಿಷ್ಟು

ಪೌರತ್ವ (ತಿದ್ದುಪಡಿ) ಕಾಯ್ದೆಯು ರಾಷ್ಟ್ರೀಯ ನಾಗರಿಕರ ನೋಂದಣಿಗೆ (ಎನ್‌ಆರ್‌ಸಿ) ಕಾರಣವಾದರೆ ಪಾಕಿಸ್ತಾನದ ಪಿತಾಮಹ ಮುಹಮ್ಮದ್ ಅಲಿ ಜಿನ್ನಾ ಅವರ ಗೆಲುವಿನ ಉದ್ದೇಶ ಪೂರ್ಣವಾಗಲಿದೆ  ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಹೇಳಿದ್ದಾರೆ. ಅವರೆಲ್ಲಾ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿಫಲವಾಗಿದ್ದಾದರೆ ಹೆಚ್ಚಿನ ಸಂಖ್ಯೆಯಜನರು  ತನ್ನ ಹಕ್ಕುಗಳಿಂದ ವಂಚಿತರಾಗುವ

Published: 26th January 2020 08:08 PM  |   Last Updated: 26th January 2020 08:10 PM   |  A+A-


ಶಶಿ ತರೂರ್

Posted By : Raghavendra Adiga
Source : ANI

ಜೈಪುರ್: ಪೌರತ್ವ (ತಿದ್ದುಪಡಿ) ಕಾಯ್ದೆಯು ರಾಷ್ಟ್ರೀಯ ನಾಗರಿಕರ ನೋಂದಣಿಗೆ (ಎನ್‌ಆರ್‌ಸಿ) ಕಾರಣವಾದರೆ ಪಾಕಿಸ್ತಾನದ ಪಿತಾಮಹ ಮುಹಮ್ಮದ್ ಅಲಿ ಜಿನ್ನಾ ಅವರ ಗೆಲುವಿನ ಉದ್ದೇಶ ಪೂರ್ಣವಾಗಲಿದೆ  ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಹೇಳಿದ್ದಾರೆ. ಅವರೆಲ್ಲಾ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿಫಲವಾಗಿದ್ದಾದರೆ ಹೆಚ್ಚಿನ ಸಂಖ್ಯೆಯಜನರು  ತನ್ನ ಹಕ್ಕುಗಳಿಂದ ವಂಚಿತರಾಗುವರು ಎಂದು ಅವರು ಹೇಳಿದ್ದಾರೆ

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತರೂರ್  'ಸಿಎಎ ಅನುಷ್ಠಾನವು ಜಿನ್ನಾ ಅವರ ಎರಡು ರಾಷ್ಟ್ರಗಳ ಸಿದ್ಧಾಂತದ ನೆರವೇರಿಕೆ' ಎಂದು ಹೇಳಿದ್ದಾರೆ."ಜಿನ್ನಾ ಗೆದ್ದಿದ್ದಾರೆ ಎಂದು ನಾನು ಹೇಳುವುದಿಲ್ಲ ಆದರೆ ಅವರು ಗೆಲ್ಲುತ್ತಾರೆ"  ಎಂದರು.

"ಸಿಎಎ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗೆ ಕಾರಣವಾದರೆ ಇದು ಆಗಿಯೇ ಆಗುತ್ತದೆ.ಹಾಗೆ ಆದಲ್ಲಿ , ಜಿನ್ನಾ ಅವರ ಗೆಲುವು ಪೂರ್ಣಗೊಂಡಿದೆ ಎಂದು ನೀವು ಹೇಳಬಹುದು. ಜಿನ್ನಾ ಎಲ್ಲಿದ್ದರೂ, ಮುಸ್ಲಿಮರು ಪ್ರತ್ಯೇಕ ದೇಶಕ್ಕೆ ಅರ್ಹರು ಎಂದು ಅವರು ಹೇಳಿದ್ದರೆಂದು ಹೇಳಬಹುದು. ಆದರೆ ಹಿಂದೂಗಳು ಮುಸ್ಲಿಮರೊಂದಿಗೆ ಒಟ್ಟಿಗಿರಲು ಸಾಧ್ಯವಿಲ್ಲ"

ಜಿನ್ನಾ ದ್ವಿ ರಾಷ್ಟ್ರ ಸಿದ್ದಾಂತದ ಪ್ರಬಲ ಪ್ರತಿಪಾದಕರಾಗಿದ್ದು  ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ಧಾರ್ಮಿಕ ತತ್ತ್ವಚಿಂತನೆಗಳಿಗೆ ಸೇರಿದ ಎರಡು ಪ್ರತ್ಯೇಕ ಜನರು, ವಿಭಿನ್ನ ಸಾಮಾಜಿಕ ಪದ್ಧತಿಗಳು ಮತ್ತು ಸಾಹಿತ್ಯವನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳಕ್ಕೀಡಾಗಿ ಪಲಾಯನ ಮಾಡುವ  ಮತ್ತು 2014 ರ ಡಿಸೆಂಬರ್ 31  ಅಥವಾ ದಕ್ಕೂ ಮೊದಲು ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಸಿಎಎ ಪೌರತ್ವ ನೀಡುತ್ತದೆ.  ಆದರೆ ಮುಸ್ಲಿಮರಿಗೆ ಇದರಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp