ಮುಂಬೈನಲ್ಲಿ ಎರಡನೇ ಮಹಿಳಾ ಅಂಚೆ ಕಚೇರಿ ಪ್ರಾರಂಭ

ಮುಂಬೈ ಮಹಾನಗರದ ಎರಡನೇ ಸಂಪೂರ್ಣ ಮಹಿಳಾ ನಿರ್ವಹಣಾ ಅಂಚೆ ಕಚೇರಿಗೆ ಶನಿವಾರ ಚಾಲನೆ ಸಿಕ್ಕಿದೆ.ಅಂಚೆ ಇಲಾಖೆಯ ಕಾರ್ಯಾಚರಣೆ ಸದಸ್ಯ್ ಅರುಂಧತಿ ಘೋಷ್ಶನಿವಾರ ಮಾಹೀಮ್ ಬಜಾರ್‌ನಲ್ಲಿ ಈ ನೂತನ ಕಚೇರಿಯನ್ನು ಉದ್ಘಾಟಿಸಿದ್ದಾರೆ. 
ಮುಂಬೈನಲ್ಲಿ ಎರಡನೇ ಮಹಿಳಾ ಅಂಚೆ ಕಚೇರಿ ಪ್ರಾರಂಭ

ಮುಂಬೈ: ಮುಂಬೈ ಮಹಾನಗರದ ಎರಡನೇ ಸಂಪೂರ್ಣ ಮಹಿಳಾ ನಿರ್ವಹಣಾ ಅಂಚೆ ಕಚೇರಿಗೆ ಶನಿವಾರ ಚಾಲನೆ ಸಿಕ್ಕಿದೆ.ಅಂಚೆ ಇಲಾಖೆಯ ಕಾರ್ಯಾಚರಣೆ ಸದಸ್ಯ್ ಅರುಂಧತಿ ಘೋಷ್ಶನಿವಾರ ಮಾಹೀಮ್ ಬಜಾರ್‌ನಲ್ಲಿ ಈ ನೂತನ ಕಚೇರಿಯನ್ನು ಉದ್ಘಾಟಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಎಲ್ಲಾ ಅಧಿಕೃತ ಹುದ್ದೆಗಳು, ಪೋಸ್ಟ್ ಮಾಸ್ಟರ್ ಉಸ್ತುವಾರಿಗಳಿಂದ ಹಿಡಿದು ಕೌಂಟರ್ ನಿರ್ವಾಹಕರವರೆಗೆ  ಮಹಿಳೆಯರಿಂದ ನಿರ್ವಹಿಸಲ್ಪಡುತ್ತವೆ. ಉಳಿತಾಯ ಬ್ಯಾಂಕ್ ಕೌಂಟರ್‌ಗಳು, ವಿವಿಧೋದ್ದೇಶ ನೋಂದಣಿ ಬುಕಿಂಗ್ ಕೌಂಟರ್‌ಗಳು, ಆಧಾರ್ ಸೆಂಟರ್, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮತ್ತು ಖಜಾನೆ ಕೆಲಸ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಅವರು ಮೇಲ್ವಿಚಾರಣೆ ನಡೆಸುತ್ತಾರೆ ಹಾಗೂ ನಿರ್ವಹಣೆ ಮಾಡುತ್ತಾರೆ.

ಅಂಚೆ ಕಚೇರಿ ಮುಂಬೈನ ಪಶ್ಚಿಮ ವಲಯದಲ್ಲಿದೆ ಮಾಹಿಮ್ ನ ಮಾಹಿಮ್ ಬಜಾರ್‌ನ ಮಾರುಕಟ್ಟೆ ಸ್ಥಳ ಮತ್ತು ವಸತಿ ಪ್ರದೇಶದಲ್ಲಿನ ಈ ಕಚೇರಿ  ಎಲ್ಲಾ ರೀತಿಯ ಅಂಚೆ ಸೇವೆಗಳನ್ನು ಸಿಬ್ಬಂದಿ ಒದಗಿಸಲಿದ್ದಾರೆ.

ಈ ಹಿಂದೆ ಮುಂಬೈನಲ್ಲಿ ಕೇವಲ ಒಂದೇ ಒಂದು ಅಂಚೆ ಕಚೇರಿಯು ಸಂಪೂರ್ಣ ಮಹಿಳಾ ಸಿಬ್ಬಂದಿಗಳಿಂದ ನಿರ್ವಹಿಸುತ್ತಿತ್ತು.ಅದು ಫೋರ್ಟ್ ಏರಿಯಾದಲ್ಲಿದೆ.

"ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಇಲಾಖೆ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಉಳಿತಾಯ ಬ್ಯಾಂಕುಗಳು, ಆರ್ಟಿಕಲ್ ಬುಕಿಂಗ್, ಆಧಾರ್ ಕೇಂದ್ರದಂತಹ ಎಲ್ಲಾ ಅಂಚೆ ಸಂಬಂಧಿತ ಸೇವೆಗಳನ್ನು ನಮ್ಮೆಲ್ಲರಿಗೂ ನೀಡುತ್ತೇವೆ  ಅಂಚೆ ಕಚೇರಿಯ ಉಸ್ತುವಾರಿ ಉಪ-ಪೋಸ್ಟ್ ಮಾಸ್ಟರ್ ಶುಭಂಗಿ ಧಾ ಹೇಳಿದ್ದಾರೆ.

"ಇದು ಇತರ ಸಾಮಾನ್ಯ ಅಂಚೆ ಕಚೇರಿಯಂತೆ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಅಂಚೆ ಕಚೇರಿಯನ್ನು ಹೊಂದಿರುವ ಕಾರಣ ನಮ್ಮೊಂದಿಗೆ ಸಂವಹನ ನಡೆಸುವ  ಮಹಿಳಾ ಗ್ರಾಹಕರಿಗೆ ಅನುಕೂಲಕರವಾಗಿರುತ್ತದೆ. " ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com