ಏನನ್ನಾದರೂ ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2020ರ ಆಕಾಶವಾಣಿಯ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂಜೆ ಬಿತ್ತರವಾಗಿದ್ದು ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ ಎಂದು ಪ್ರಧಾನಿ ಸ್ಫೂರ್ತಿ ತುಂಬಿದರು.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2020ರ ಆಕಾಶವಾಣಿಯ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂಜೆ ಬಿತ್ತರವಾಗಿದ್ದು ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ ಎಂದು ಪ್ರಧಾನಿ ಸ್ಫೂರ್ತಿ ತುಂಬಿದರು.

ಇತ್ತೀಚೆಗೆ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ, ಖಾದಿ ಬಳಕೆ, ನಗದು ರಹಿತ ವ್ಯವಹಾರ ಮೊದಲಾದ ಹೊಸ ವಿಚಾರಗಳನ್ನು ಅಳವಡಿಸಲಾಗಿದೆ. ಇದು ಸಣ್ಣ ಸಣ್ಣ ಸಂಕಲ್ಪಗಳ ಮಹತ್ತರ ಸಾಧನೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಜಲಸಂರಕ್ಷಣೆಗೆ ಹೊಸ ಪರಿಕಲ್ಪನೆಯಡಿ ಆರಂಭವಾಗಿರುವ ಜಲಶಕ್ತಿ ಅಭಿಯಾನಕ್ಕೆ ಜನರ ಪಾಲ್ಗೊಳ್ಳುವಿಕೆಯಿಂದ ಸ್ವಚ್ಛತೆ ಸಾಕಾರವಾಗಿದೆ ಎಂದರು. ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ಖೇಲೋ ಇಂಡಿಯಾ ಗೇಮ್ಸ್ ನಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ ಎಂದು ಕೊಂಡಾಡಿದ ಪ್ರಧಾನಿ, ಕ್ರೀಡಾ ಪ್ರೋತ್ಸಾಹದ ಅಗತ್ಯತೆಯನ್ನು ಒತ್ತಿ ಹೇಳಿದರು.

ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಮೋದಿ
ಬ್ರೂ–ರಿಯಾಂಗ ವಲಸಿಗರ ಸಮಸ್ಯೆ ನಿವಾರಿಸಲು ಐತಿಹಾಸಿಕ ನಿರ್ಣಯ ಕೈಗೊಂಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಹಿಂಸಾಚಾರದ ಹಾದಿಯಲ್ಲಿದ್ದ ಜನರು ಶಾಂತಿಯಲ್ಲಿ ನಂಬಿಕೆಯಿರಿಸಿ, ದೇಶದ ಪಗ್ರತಿಯಲ್ಲಿ ಭಾಗಿಯಾಗಿರುವುದು ಸಂತಸದ ಸಂಗತಿ ಎಂದಿದ್ದಾರೆ. 

ಹೊಸ ವರ್ಷ ಹಾಗೂ ಹೊಸ ದಶಕದ ಮೊದಲ ‘ಮನ್ ಕಿ ಬಾತ್‘ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,  ಇತಿಹಾಸದ ಬೇಸರದ ಅಧ್ಯಾಯವಾದ 25 ವರ್ಷಗಳ ವಲಸಿಗರ ಸಮಸ್ಯೆ ಮುಕ್ತಾಯವಾಗಿದೆ. ಹಿಂಸಾಚರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದರು. 

ಬ್ರೂ ವಲಸಿಗರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ 600 ಕೋಟಿ ರೂ. ವೆಚ್ಚ ಮಾಡುತ್ತಿದೆ. ವಲಸಿಗರು ತಮ್ಮ ಅರ್ಧ ಜೀವನವನ್ನು ಪುನರ್ವಸತಿ ಕೇಂದ್ರದಲ್ಲಿಯೇ ಕಳೆಯಬೇಕಾಯಿತು ಎಂಬುದು ಬೇಸರದ ಸಂಗತಿ. ಆದರೂ, ಅವರು ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇಟ್ಟಿದ್ದರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com