ಚೀನಾದಿಂದ ಮರಳಿ ಭಾರತಕ್ಕೆ ಬಂದ ಬಿಹಾರ ಮಹಿಳೆಯಲ್ಲಿ ಕೊರೋನಾ ವೈರಸ್ ಶಂಕೆ

ಚೀನಾದಿಂದ ಮರಳಿ ಭಾರತಕ್ಕೆ ಬಂದಿರುವ ಬಿಹಾರ ಮೂಲದ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಇರುವ ಶಂಕೆಗಳು ವ್ಯಕ್ತವಾಗಿದ್ದು, ಮಹಿಳೆ ಪಾಟ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನ: ಚೀನಾದಿಂದ ಮರಳಿ ಭಾರತಕ್ಕೆ ಬಂದಿರುವ ಬಿಹಾರ ಮೂಲದ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಇರುವ ಶಂಕೆಗಳು ವ್ಯಕ್ತವಾಗಿದ್ದು, ಮಹಿಳೆ ಪಾಟ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

ಎಕ್ತಾ ಕುಮಾರಿ ಎಂಬ ಮಹಿಳೆ ಜನವರಿ 22 ರಂದು ವಿಮಾನದ ಮೂಲಕ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಕೋಲ್ಕತಾದಿಂದ ಪಾಟ್ನಗೆ ರೈಲಿನಲ್ಲಿ ಬಂದಿದ್ದಾರೆ. ಕುಮಾರಿಯವರ ಪೋಷಕರು ಶಾಂತಿ ನಗರ ಕಾಲೋನಿಯಲ್ಲಿ ನೆಲೆಯೂರಿದ್ದಾರೆ. 

ಸಂಶೋಧನೆಯೊಂದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಯುವ ಸಲುವಾಗಿ ತಿಯಾಂಜಿನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಇದೀಗ ಭಾರತಕ್ಕೆ ಮರಳಿದ್ದಾರೆ. 

ಮಹಿಳೆ ಯಾವುದೇ ರೀತಿಯ ಭಿತಿಗೆ ಒಳಗಾಗಿಲ್ಲ. ಸಾಮಾನ್ಯರಂತೆಯೇ ಮಾತನಾಡುತ್ತಿದ್ದಾರೆ. ಆದರೂ, ಆಕೆಯನ್ನು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 

ಮಹಿಳೆಯಲ್ಲಿ ಕೊರೋನಾ ವೈರಸ್ ಇರುವ ಕುರಿತು ಶಂಕೆಗಳು ವ್ಯಕ್ತವಾಗಿದೆ. ಆದರೆ, ಇನ್ನೂ ದೃಢಪಟ್ಟಿಲ್ಲ. ಪ್ರಸ್ತುತ ಮಹಿಳೆಯಲ್ಲಿ ಸ್ವಲ್ಪ ಪ್ರಮಾಣದ ಜ್ವರ ಕಂಡು ಬಂದಿದೆ. ರೈಲಿನಲ್ಲಿ ಪ್ರಯಾಣ ಮಾಡಿದ್ದರಿಂದಾಗಿ ಜ್ವರ ಬಂದಿದೆ ಎಂದು ಮಹಿಳೆ ಹೇಳಿದ್ದಾರೆ. ಪ್ರಸ್ತುತ ಛಪ್ರಾ ಸಾದರ್ ಆಸ್ಪತ್ರೆಯ ಐಸಿಯುವಿನಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಕೊರೋನಿಯಾ ವೈರಸ್ ಕಂಡು ಬಂದಿರುವ ಜನರಿಗಾಗಿ ವಿಶೇಷ ಕೊಠಡಿಗಳನ್ನು ರಚಿಸಲಾಗಿದ್ದು, ಈ ಕೊಠಡಿಯಲ್ಲಿಯೇ ಮಹಿಳೆಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com